ವಿಜಯಪುರ: ತೆಪ್ಪ ಮುಗುಚಿದ ಪರಿಣಾಮ 6 ಜನ ನೀರಲ್ಲಿ ಮುಳುಗಿ ಬಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ತಾಲೂಕಿ ಕುಮಟಗಿ ಕೆರೆಯಲ್ಲಿ ಈ ಘಟನೆ ನಡೆದಿದೆ. ತೆಪ್ಪ ಮುಗುಚಿ ಬೀಳುತ್ತಿದ್ದಂತೆ ಅದರಲ್ಲಿದ್ದ 6 ಜನ ನೀರಲ್ಲಿ ಬಿದ್ದಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ಸೋಯಲ್ ಹತ್ತರಕಿಹಾಳ(25) ಮತ್ತು ನಿಸಾರ್ ಜಮಾದಾರ್(19) ಸಾವನ್ನಪ್ಪಿದ ದುರ್ದೈವಿಗಳು.
ಕುಮಟಗಿ ಕೆರೆಯಲ್ಲಿ ಆರು ಯುವಕರು ತೆಪ್ಪ ತೆಗದುಕೊಂಡು ಹೋಗಿದ್ದರು. ಮೋಹಸಿನ್ ಮುಲ್ಲಾ, ತೌಫೀಕ್, ಮೋಹಸೀನ್ ಹಾಗೂ ರಿಯಾಜ್ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.