ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ(Silicon City) ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಜಯನಗರದ ಮೂರನೇ ಹೋಂತದ ನಕಲು ಬಂಡೆ ಹತ್ತಿರ ಈ ಘಟನೆ ನಡೆದಿದೆ. ಪ್ರವೀಣ್, ರವಿ ನಾಪತ್ತೆಯಾಗಿರುವ ಬಾಲಕರು ಎನ್ನಲಾಗಿದೆ.
ಈ ಬಾಲಕರು ಶನಿವಾರದಿಂದಲೇ ನಾಪತ್ತೆಯಾಗಿದ್ದಾರೆ. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು(children) ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ವಿದ್ಯಾಶ್ರೀ ಹಾಗೂ ಮಹೇಶ್ ದಂಪತಿ ಪುತ್ರ ಪ್ರವೀಣ್, ಜಯನಗರದ ಎಂಇಎಸ್ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮತ್ತೋರ್ವ ಬಾಲಕ ರವಿ, 9ನೇ ತರಗತಿಯಲ್ಲಿ ಓದುತ್ತಿದ್ದ. ಈ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ(police station) ಪ್ರಕರಣ ದಾಖಲಾಗಿದೆ.
ಕಳೆದ ಒಂದು ತಿಂಗಳಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದು, ಪೊಲೀಸರು (police)ಹುಡುಕಾಟ ನಡೆಸುತ್ತಿದ್ದಾರೆ. ಈ ಮಕ್ಕಳು ಜಯನಗರ ಬಸ್ ನಿಲ್ದಾಣದ ಹತ್ತಿರ ಬಂದೆಂ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಪಾಲಕರ ಆಕ್ರಂದನ ಹಾಗೂ ಆತಂಕ ಮುಗಿಲು ಮುಟ್ಟಿದೆ.