ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗಿದೆ.
ಹೀಗಾಗಿ ಕ್ರೇಸ್ಟ್ ಗೇಟ್ ಜಲ ರಾಶಿ ಧುಮ್ಮುಕ್ಕುತ್ತಿದೆ. ಜಲಾಶಯಕ್ಕೆ ದೀಪಾಲಂಕಾರ ಮಾಡಲಾಗಿದ್ದು, ಬಗೆಬಗೆಯ ದೀಪಗಳಿಂದ ಟಿಬಿ ಡ್ಯಾಂ ಕಂಗೋಳಿಸುತ್ತಿದೆ. ನಿನ್ನೆಯಿಂದ ಡ್ಯಾಂನಿಂದ 59 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಅಲ್ಲದೇ, ಜಲಾಶಯದ ಕೆಳಭಾಗದ ಜಲರಾಶಿ ನೋಡಲು ಜನರ ದಂಡು ಆಗಮಿಸುತ್ತಿದೆ. ಹೀಗಾಗಿ ಮುನಿರಾಬಾದ್ ಬಳಿಯ ಸೇತುವೆಯಲ್ಲಿ ನಿಂತು ಜನರು ಜಲರಾಶಿಯ ವೈಭವ ಕಾಣುತ್ತಿದೆ. ಗುಂಪು ಗುಂಪಾಗಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.