ಕಲಬುರಗಿ : ಜಿಲ್ಲೆಯಲ್ಲಿ ವ್ಯಾಪಾಕ ಮಳೆಯಾಗುತ್ತಿದ್ದು, ಬೆಣ್ಣೆತೊರೆ ಜಾಲಾಶಯದಿಂದ ಅಪಾರ ನೀರು ಬಿಡುಗಡೆಯಾಗಿದೆ.
ವಿಪರೀತ ಮಳೆಯಿಂದಾಗಿ ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾಮಸ್ಥರಿಗೆ ಪ್ರವಾಹ ಭೀತಿ ಶುರುವಾಗಿದ್ದು, ಗ್ರಾಮದ ಹೋಟೆಲ್ ವರೆಗೂ ನೀರು ಬಂದಿದೆ. ಜಲಾಶಯ ಕೆಳಭಾಗದ ರೈತರ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ನೂರಾರು ಎಕರೆ ಪ್ರದೇಶದ ಹೆಸರು, ಉದ್ದು, ಸೋಯಾ, ತೊಗರಿ ಸೇರಿ ಇತರೆ ಬೆಳೆಗಳು ಮುಳುಗಡೆಯಾಗಿದೆ.
ಬೆಳೆ ಹಾನಿಯಿಂದ ರೈತರು ಆತಂಕಕ್ಕೆಗೊಳಗಾಗಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಕೃಷಿ ಮಾಡಿದ್ದರು. ಮಳೆಯಿಂದಾಗಿ ನೀರು ಪಾಲಾಯಿತೆಂದು ಕಂಗಾಲಾಗಿದ್ದಾರೆ. ಪ್ರತಿ ವರ್ಷ ಬೆಣ್ಣೆತೋರೆ ಜಲಾಶಯದಿಂದ ಇದೇ ಸ್ಥಿತಿ ಎದುರಾಗುತ್ತಿದ್ದು, ಬೆಳೆ ಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.