ಹೈದರಾಬಾದ್ : 7ನೇ ಕ್ಲಾಸ್ ವಿದ್ಯಾರ್ಥಿನಿಯ ರೇಪ್ ಮಾಡಿದ ಟ್ಯೂಷನ್ ಟೀಚರ್‌ಗೆ ತೆಲಂಗಾಣ ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ವಿಧಿಸಿ ಎಂದು ಕೋರ್ಟ್ ಆದೇಶ ನೀಡಿದೆ.
ಸುದೀರ್ಘ ವಿಚಾರಣೆಯ ನಂತರ ಶನಿವಾರ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ವಿಶೇಷ ನ್ಯಾಯಾಲಯ ಶಿಕ್ಷಕ ದ್ರೋಣರಾಜು ಸುಬ್ರಹ್ಮಣ್ಯೇಶ್ವರ ರಾವ್‌ನ್ನು (60) ಅಪರಾಧಿ ಘೋಷಿಸಿ, 10 ವರ್ಷ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದೆ.
2017ರ ಡಿಸೆಂಬರ್‌ನಲ್ಲಿ ಈ ಕೃತ್ಯ ನಡೆದಿದೆ. ಸಂತ್ರಸ್ತ ಬಾಲಕಿ ರಾಜೇಂದ್ರನಗರ ಮಂಡಲದ ಹೈದರ್ಗುಡ ನಿವಾಸಿಯಾಗಿದ್ದು, 7ನೇ ತರಗತಿಯಲ್ಲಿ ಓದುತ್ತಿದ್ದಳು. ತಾವಿದ್ದ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದ ಅಪರಾಧಿ ದ್ರೋಣರಾಜು ಸುಬ್ರಹ್ಮಣ್ಯೇಶ್ವರ ರಾವ್ ಮನೆಗೆ ಟ್ಯೂಷನ್‌ಗೆಂದು ಹೋಗುತ್ತಿದ್ದಳು. ಹೀಗೊಂದು ದಿನ ಸಂತ್ರಸ್ತ ಬಾಲಕಿಯ ಪೋಷಕರು ಚೆನ್ನೈಗೆ ಹೋಗಿದ್ದರು. ತಡರಾತ್ರಿ ಬಾಲಕಿ ತನ್ನ ತಾಯಿಗೆ ಕರೆ ಮಾಡಿ, ಟ್ಯೂಷನ್ ಟೀಚರ್ ಕ್ಲಾಸ್ ಮುಗಿದ ಬಳಿಕ ಎಲ್ಲರನ್ನು ಕಳುಹಿಸಿ, ನನ್ನನ್ನು ಅವರ ರೂಮ್‌ಗೆ ಕರೆದುಕೊಂಡು ಹೋಗಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಳು.
ಬಾಲಕಿಯ ತಾಯಿ ಊರಿಗೆ ಹಿಂತಿರುಗಿ ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ಟ್ಯೂಷನ್ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದರು. ಇನ್ಸ್ಪೆಕ್ಟರ್ ವಿ ಉಮೇಂದರ್ ಮತ್ತು ಸಹಾಯಕ ಪೊಲೀಸ್ ಆಯುಕ್ತ ಕೆ.ಅಶೋಕ್ ಚಕ್ರವರ್ತಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಿ, ಬಳಿಕ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದರು.