ಬೆಂಗಳೂರು ಗ್ರಾಮಾಂತರ : ನಾ ಕೊಡೆ ನೀ ಬಿಡೆ ಹಗ್ಗ ಜಗ್ಗಾಟ ನಡೆದಿದೆ ಇದಕ್ಕೆಲ್ಲ ಕಾರಣ ಹೈಕಮಾಂಡ್. ಕಪ್ಪಕಾಣಿಕೆಗಾಗಿ ಹೈಕಮಾಂಡ್ ಇದೆಲ್ಲ ಮಾಡಿಸುತ್ತಿದೆ ಎಂದು ಯತೀಂದ್ರ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡುತ್ತಾ, ಎರಡೂವರೆ ವರ್ಷ ಒಪ್ಪಂದ ಆಗಿತ್ತಾ ಇಲ್ವಾ ಅನ್ನೋದನ್ನ ಹೈಕಮಾಂಡ್ ಸ್ಪಷ್ಟನೆ ಕೊಡ್ತಿಲ್ಲ.ಈ ಕಡೆ ಇವರನ್ನ ಛೂ ಬಿಡ್ತಾರೆ ಆ ಕಡೆ ಅವರನ್ನ ಛೂ ಬಿಡ್ತಿದ್ದಾರೆ.ಎರಡೂ ಕಡೆಯಿಂದ ಬಂಡವಾಳ ಮಾಡಿಕೊಳ್ತಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಗಳನ್ನ ನಡೆಸಬೇಕು ಅಲ್ವಾ ಅವರ ಜಾಸ್ತಿ ಕೊಟ್ಟರೆ ಅವರು ಆಗ್ತಾರೆ.ಇವರು ಜಾಸ್ತಿ ಕೊಟ್ಟರೆ ಇವರು ಆಗ್ತಾರೆ ಅಂತ ಎತ್ತಿಕಟ್ತಿದ್ದಾರೆ.ಇವರ ಇಬ್ಬರ ಜಗಳದಲ್ಲಿ ಇಡೀ ರಾಜ್ಯ ಹಾಳಾಗ್ತಿದೆ. ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗಭಾಷಿಯಲ್ಲಿ ಅಂದಹಾಗೆ ಆಗ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಮುಗೀತು | ಟಕ್ಕರ್ ಕೊಟ್ಟ ಡಿಕೆಶಿ



















