ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಸೂಕ್ತ ದಾಖಲೆಗಳಿಲ್ಲದೆ ದೇಶದಲ್ಲಿ ವಾಸಿಸುತ್ತಿರುವ ವಲಸಿಗರನ್ನು ಗಡಿಪಾರು ಮಾಡಲು ಸೇನೆಯ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಟ್ರಂಪ್ ವಲಸೆ ವಿರೋಧಿ ಅಭಿಯಾನ ನಡೆಸಿದ್ದರು. ದಾಖಲೆ ಹೊಂದಿರದ ವಲಸಿಗರನ್ನು ಗಡಿಪಾರು ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಆ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪರಾಧ ಹಿನ್ನೆಲೆಯುಳ್ಳ ವಲಸಿಗರನ್ನು ಮೊದಲು ಗಡಿಪಾರು ಮಾಡಲು ಟ್ರಂಪ್ ಈಗಾಗಲೇ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಯುಎಸ್‌ನಲ್ಲಿ 11 ಮಿಲಿಯನ್ ಜನರು ಕಾನೂನುಬಾಹಿರವಾಗಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಟ್ರಂಪ್ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಹಿಂದಿನ ಟ್ರಂಪ್ ಆಡಳಿತ ಅವಧಿಯಲ್ಲಿ ಮೆಕ್ಸಿಕೊ ಗಡಿ ಭಾಗದ ಪ್ರದೇಶಗಳಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಸುಲಿಗೆ, ಅಪಹರಣ, ಕಾನೂನು ಬಾಹಿರ ಚಟುವಟಿಕೆಗಳ ಏರಿಕೆಯಾಗಿತ್ತು. ಆದರೆ, ಬೈಡನ್ ಅಧಿಕಾರವಧಿಯಲ್ಲಿ ಕಾನೂನಿ ಅಡಿಯಲ್ಲಿ ಅಮೇರಿಕಾದೊಳಗೆ ಪ್ರವೇಶಿಸಲು ಮುಂದಾಗಿದ್ದರು. ಈಗ ಅವರೆನ್ನಲ್ಲ ಹೊರ ಹಾಕಲು ಟ್ರಂಪ್ ಸೂತ್ರ ಹೆಣೆದಿದ್ದಾರೆ.