ಅಮೆರಿಕದ ಅಧ್ಯಕ್ಷ ನೂತನ ಡೊನಾಲ್ಡ್ ಟ್ರಂಪ್,(Donald Trump) ಹಲವು ಪ್ರಮುಖ ಆರ್ಥಿಕ ಮತ್ತು ರಾಜಕೀಯ ತಿದ್ದುಪಡಿ ಆದೇಶಗಳಿಗೆ ಸಹಿ ಹಾಕಿದ್ದಾರೆ. ಭಾರತವನ್ನು ಅತ್ಯಧಿಕ ತೆರಿಗೆ ವಿಧಿಸುವ ದೇಶ ಎಂದು ಕರೆದಿರುವ ಟ್ರಂಪ್ ದೊಡ್ಡ ಮಟ್ಟದ ಆಮದು ಶುಲ್ಕ ವಿಧಿಸುವ ಬೆದರಿಕೆ ಒಡ್ಡಿದ್ದರು. ಆದಾಗ್ಯೂ ಮೋದಿ ಮತ್ತು ಟ್ರಂಪ್ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಭಾರತವು ಟ್ರಂಪ್ ಮನದಿಂಗಿತದಂತೆ ಹೈ-ಎಂಡ್ ಮೋಟಾರ್‌ಸೈಕಲ್ ಮತ್ತು ಕಾರುಗಳ ಮೇಲಿನ ಆಮದು ತೆರಿಗೆ ಕಡಿಮೆ ಮಾಡಿದೆ. ಪರಿಷ್ಕೃತ ತೆರಿಗೆ ವ್ಯವಸ್ಥೆಯಿಂದ ಅಮೆರಿಕದ ಮೂಲದ ಹಾರ್ಲೆ-ಡೇವಿಡ್ಸನ್ (Harley-Davidson) ಮತ್ತು ಟೆಸ್ಲಾ (Tesla) ಭಾರತಕ್ಕೆ ಪ್ರಭಾವ ಬೀರಲಿದೆ.

ಪರಿಷ್ಕೃತ ತೆರಿಗೆ ಮಾದರಿಯ ಪ್ರಕಾರ, 1,600 ಸಿಸಿವರೆಗಿನ ಎಂಜಿನ್ ಸಾಮರ್ಥ್ಯವಿರುವ ಮೋಟಾರ್‌ಸೈಕಲ್‌ಗಳನ್ನು ಸಂಪೂರ್ಣ ಆಮದು ಮಾಡಿದರೆ ಈಗ ಶೇಕಡಾ 40 ತೆರಿಗೆ ವಿಧಿಸಲಾಗುತ್ತದೆ. ಇದು ಹಿಂದೆ ಶೇಕಡಾ 50 ಆಗಿತ್ತು. ಹೀಗಾಗಿ ಹಾರ್ಲೆ ಬೈಕ್‌ಗಳು ಖಂಡಿತವಾಗಿಯೂ ಕಡಿಮೆ ಬೆಲೆಗೆ ಲಭ್ಯವಾಗಲಿವೆ.
ಈ ಮೋಟಾರ್‌ಸೈಕಲ್‌ಗಳ ಮೇಲಿನ ತೆರಿಗೆ ಭಾರತ ಮತ್ತು ಅಮೆರಿಕ ನಡುವಿನ ಪ್ರಮುಖ ವಿವಾದದ ಅಂಶವಾಗಿತ್ತು. ಪರಿಷ್ಕರಣೆಯು ಸಮಸ್ಯೆಯನ್ನು ಪರಿಹರಿಸಿದಂತೆ ತೋರುತ್ತದೆ. ಭಾರತವು ಅತ್ಯಧಿಕ ತೆರಿಗೆ ವಿಧಿಸುವ ದೇಶ ಎಂದು ಟ್ರಂಪ್ ತಮ್ಮ ಪ್ರಮುಖ ಆರ್ಥಿಕ ನೀತಿ ಭಾಷಣದಲ್ಲಿ ಹೇಳಿದ್ದರು.

ಸಂದರ್ಶನ ಒಂದರಲ್ಲಿ ಟ್ರಂಪ್ ʼʼನಾವು ಬೇಜಾರು ಮಾಡಿಕೊಳ್ಳುವಂತ ದೇಶವಲ್ಲ. ನೀವು ಭಾರತವನ್ನು ನೋಡಿ, ನನ್ನ ಸ್ನೇಹಿತ ಪ್ರಧಾನಿ (ನರೇಂದ್ರ) ಮೋದಿಯನ್ನು ನೋಡಿ. ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳಿಗೆ ಭಾರತ 100% ತೆರಿಗೆ ವಿಧಿಸುತ್ತದೆ, ಆದರೆ ನಾವು ಅವರ ಉತ್ಪನ್ನಗಳಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ. ಹೀಗಾಗಿ, ನಾನು ಮೋದಿಯನ್ನು ಕರೆಸಿ ಮಾತನಾಡುವೆ ಎಂದು ಹೇಳಿದ್ದರು.
2025-26ರ ಕೇಂದ್ರ ಬಜೆಟ್ ಪ್ರಕಾರ, **ಅರ್ಧ-ಜೋಡಣೆ (SKD) ಯೂನಿಟ್‌ಗಳ ತೆರಿಗೆ 25% ನಿಂದ 20% ಕ್ಕೆ ಕಡಿಮೆಯಾಗಿದೆ. ಸಂಪೂರ್ಣವಾಗಿ ಜೋಡಿಸದ (CKD) ಯೂನಿಟ್‌ಗಳ ತೆರಿಗೆ 15% ನಿಂದ 10% ಕ್ಕೆ ಇಳಿಕೆಯಾಗಿದೆ. ಲಕ್ಸುರಿ ಕಾರುಗಳ ಮೇಲಿನ ತೆರಿಗೆ 125% ನಿಂದ 70% ಕ್ಕೆ ಕಡಿಮೆಯಾಗಿದ.
ಅಧಿಕೃತ ಪ್ರಕಟಣೆ ಕೊಟ್ಟಿಲ್ಲ
ಭಾರತ ಸರ್ಕಾರ ʼಟ್ರಂಪ್ ಪರಿಣಾಮʼದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪರಿಷ್ಕರಣೆ “ಮೇಕ್ ಇನ್ ಇಂಡಿಯಾ”ಗೆ ಪೂರಕ ಎಂದಷ್ಟೇ ಹೇಳಿದೆ. ಆದರೆ ಅಮೆರಿಕ ಅಧ್ಯಕ್ಷ ಚೀನಾ, ಭಾರತ ಮತ್ತು ಬ್ರೆಜಿಲ್ ಅನ್ನು ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರಗಳು ಎಂದು ಕರೆದ ನಂತರ ಈ ಪರಿಷ್ಕರಣೆ ನಡೆದಿದೆ ಎಂಬುದು ವಾಸ್ತವ .

ಹಾರ್ಲೆ-ಡೇವಿಡ್ಸನ್: ಭಾರತ ಪ್ರವೇಶ, ನಿರ್ಗಮನ
ಅಮೆರಿಕಾದ ಹೆಮ್ಮೆಯ ಮೋಟಾರ್‌ಸೈಕಲ್ ಬ್ರಾಂಡ್ ಹಾರ್ಲೆ-ಡೇವಿಡ್ಸನ್ 2010ರಲ್ಲಿ ಭಾರತ ಪ್ರವೇಶಿಸಿತ್ತು. , ಆದರೆ 2020ರಲ್ಲಿ, ತನ್ನ ʼರಿವೈರಿಂಗ್ ಸ್ಟ್ರಾಟೆಜಿ” ಅಡಿ ಭಾರತ ತೊರೆದಿತ್ತು. ಬಳಿಕ ʼಹೀರೋ ಮೋಟೋಕಾರ್ಪ್ʼ ಹಾರ್ಲೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿತು. ಈ ಒಪ್ಪಂದದ ಫಲವಾಗಿ, *ಹಾರ್ಲೆ-ಡೇವಿಡ್ಸನ್ 440X*, ಅತ್ಯಂತ ಅಗ್ಗದ ಹಾರ್ಲೆ ಬೈಕ್ ಮಾರುಕಟ್ಟೆಯಲ್ಲಿದೆ.
ಟೆಸ್ಲಾಗೆ ಹಸಿರು ನಿಶಾನೆ
ಭಾರತ ಸರ್ಕಾರದ ಹೊಸ ತೆರಿಗೆ ನೀತಿ ಟೆಸ್ಲಾ ಕಂಪನಿಗೆ ಭಾರತ ಪ್ರವೇಶಿಸಲು ಹೆದ್ದಾರಿಯಂತಾಗಿದೆ. ಎಲಾನ್ ಮಸ್ಕ್ ಈ ಹಿಂದೆ ಟ್ವಿಟರ್ ನಲ್ಲಿ ಭಾರತಕ್ಕೆ ಬರುವ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇತ್ತು. ಆದರೆ ತುರ್ತು ಕೆಲಸದ ಕಾರಣ ಈ ಭೇಟಿ ತಡವಾಗಿದೆ ಎಂದಿದ್ದರು.