ಬೆಂಗಳೂರು: ನ್ಯಾಯಮೂರ್ತಿ ವಿರುದ್ಧ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಸಂಕಷ್ಟ ಶುರುವಾಗಿದೆ.
ಶಿಗ್ಗಾವಿ ಉಪಚುನಾವಣೆ ವೇಳೆ ಮಾತನಾಡಿದ್ದ ಜೋಶಿ, ನ್ಯಾಮೂರ್ತಿ ಮೈಕಲ್ ಕುನ್ಹಾ ಅವರನ್ನು ರಾಜಕೀಯ ಏಜೆಂಟ್ ಎಂದಿದ್ದರು. ಬಿಜೆಪಿ ವುರುದ್ಧ ಚುನಾವಣೆ ಹೊತ್ತಿನಲ್ಲೇ ನ್ಯಾಯಾಂಗ ತನಿಖೆ ವರದಿ ನೀಡಿದ್ದಾರೆ ಎಂದು ಅವಹೇಳನಾಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಪಿಪಿಇ ಕಿಟ್ ಹಗರಣ ಸಂಬಂಧ ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ಆಯೋಗ ನೀಡಿದೆ. ಆದರೆ, ಅವರ ಬಗ್ಗೆ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲ ಥಾವರಚೆಂದ್ ಗೆಹ್ಲೋಟ್ ಅವರನ್ನು ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಭೇಟಿ ಮಾಡಿ ದೂರೂ ನೀಡಿದ್ದಾರೆ. ಅಲ್ಲದೇ, ಕೇಂದ್ರ ಸಚಿವರ ವಿರುದ್ಧ ಸೂಕ್ತ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿ ಎಂದು ರಾಜ್ಯಪಾಲರದಲ್ಲಿ ಮನವಿ ಮಾಡಿದ್ದಾರೆ.