ಬೆಂಗಳೂರು: ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಟ ವಿಚಾರದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಕಷ್ಟ ನಿಶ್ಚಿತ ಎಂಬ ಮಾತುಗಳು ಶುರುವಾಗಿದೆ.
ವರ್ಷದಲ್ಲಿ ಹಲವು ಬಾರಿ ದುಬೈ ಪ್ರವಾಸಕ್ಕೆಂದು ತೆರಳುತ್ತಿದ್ದ ನಟಿ ರನ್ಯಾ ರಾವ್ ಅವರನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣದಿಂದ ಹೊರಗೆ ಕರೆತರಲು ಡಿಜಿಪಿ ರಾಮಚಂದ್ರ ರಾವ್ ಸಹಕರಿಸಿದ್ದ ಆರೋಪ ಕೇಳಿ ಬಂದಿದೆ. ಇದರಿಂದ ಖುದ್ದು ಡಿಜಿಪಿಗೂ ಸಂಕಷ್ಟ ನಿಶ್ಚಿತ ಎಂಬ ಮಾತುಗಳು ಕೇಳಿ ಬಂದಿವೆ.