ಬೆಂಗಳೂರು: ಬಿಗ್ ಬಾಸ್ 11ರ ಸ್ಪರ್ಧಿಗೆ ಟ್ರೋಲ್ ಪೇಜ್ ಗಳು ತಲೆ ನೋವು ತಂದಿಡುತ್ತಿವೆ.
ಬಿಗ್ ಬಾಸ್ ಸ್ಪರ್ಧಿ ರಜತ್(rajat) ಹಾಗೂ ಮಾಜಿ ಗೆಳತಿ ಜೊತೆಗಿನ ಫೋಟೋವನ್ನು ಈಗ ಟ್ರೋಲಿಗರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ಫೋಟೋ)photo) ಡಿಲಿಟ್ ಮಾಡುವಂತೆ ರಜತ್ ಪತ್ನಿ ಟ್ರೋಲಿಗರಲ್ಲಿ ಮನವಿ ಮಾಡಿದ್ದಾರೆ. ಆದರೆ, ರಜತ್ ಪತ್ನಿ ಹತ್ತಿರ ಹಣಕ್ಕೆ ಟ್ರೋಲಿಗರು ಡಿಮ್ಯಾಂಡ್(demand) ಇಟ್ಟಿದ್ದಾರೆ. ಡಿಮ್ಯಾಂಡ್ ನಂತೆ ರಜತ್ ಪತ್ನಿ ಅಕ್ಷಿತಾ ಅಪರಿಚತ ವ್ಯಕ್ತಿಗೆ 6500 ರೂ. ಹಣ (money)ಹಾಕಿದ್ದಾರೆ.
ಹಣ ಪಡೆದ ನಂತರವೂ ಟ್ರೋಲಿಗರು ಸುಮ್ಮಾನಿಗಲ್ಲ. ಬೇರೆ ಬೇರೆ ಟ್ರೋಲ್ ಪೇಜ್ ನಲ್ಲಿ ಮತ್ತೆ ಫೋಟೋ ಅಪ್ಲೋಡ್ ಮಾಡಿದ್ದಾರೆ. ಆಗ ಅಕ್ಷಿತಾ(Akshita) ಮತ್ತೆ ಫೋಟೋ ಡಿಲೀಟ್ ಮಾಡಲು ಕೇಳಿದಾಗ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇದರಿಂದ ಬೇಸತ್ತ ಅಕ್ಷಿತಾ, ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ(Cyber Station) ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಎಫ್ಐಆರ್(FIR) ದಾಖಲಿಸಿದ್ದಾರೆ. ಇತ್ತ ಎಫ್ ಐಆರ್ ದಾಖಲಾಗುತ್ತಿದ್ದಂತೆ ಫೋಟೋಗಳನ್ನು ಟ್ರೋಲಿಗರು ಡಿಲಿಟ್ ಮಾಡಿದ್ದಾರೆ. ಫೋಟೋ ಅಪ್ಲೋಡ್(UPLOAD) ಮಾಡಿದ ಅಕೌಂಟ್ ಗಳು ಕೂಡ ಡಿ ಆ್ಯಕ್ಟಿವ್ ಆಗಿವೆ. ಹಣ ಸುಲಿಗೆ ಮಾಡಿದ ಅಪರಿಚಿತರಿಗಾಗಿ ಈಗ ಪೊಲೀಸರು (police)ಬಲೆ ಬೀಸಿದ್ದಾರೆ.