ಬೆಂಗಳೂರು: ಕೆಲವೇ ದಿನಗಳಲ್ಲಿ ನವೆಂಬರ್ ತಿಂಗಳಿಗೆ ವಿದಾಯ ಹೇಳಲಿದ್ದೇವೆ. ಆ ಮೂಲಕ 2025ರ ಕೊನೆಯ ತಿಂಗಳಿಗೆ ಕಾಲಿಡಲಿದ್ದೇವೆ. ಆದರೆ, ಡಿಸೆಂಬರ್ ಪ್ರವೇಶಿಸುವ ಮೊದಲು ಹಣಕಾಸಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮಾಡಿ ಮುಗಿಸಬೇಕಿದೆ. ಅದರಲ್ಲೂ, ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಕೆಲವು ಪ್ರಕ್ರಿಯೆಗಳನ್ನು ನವೆಂಬರ್ 30ರೊಳಗೆ ಮಾಡಿ ಮುಗಿಸಬೇಕಿದೆ.
ಕೆವೈಸಿ ಅಪ್ಡೇಟ್
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾತೆ ಹೊಂದಿದವರು ಕಡ್ಡಾಯವಾಗಿ ನವೆಂಬರ್ 30ರೊಳಗೆ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 30ರ ಗಡುವು ನೀಡಲಾಗಿತ್ತು. ಈಗ ನವೆಂಬರ್ 30ರೊಳಗೆ ಕೆವೈಸಿ ಅಪ್ಡೇಟ್ ಮಾಡಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಖಾತೆಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ.
ಯುಪಿಎಸ್ ಆಯ್ಕೆ ಕುರಿತು ನಿರ್ಧಾರ
ಕೇಂದ್ರ ಸರ್ಕಾರವು ನೌಕರರಿಗಾಗಿ ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಜಾರಿಗೆ ತಂದಿದೆ. ಆದರೆ, ಈಗಾಗಲೇ ಎನ್ ಪಿಎಸ್ ಸದಸ್ಯರಾಗಿರುವ ನೌಕರರು ಯುಪಿಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಲು ನವೆಂಬರ್ 30ರ ಗಡುವು ನೀಡಲಾಗಿದೆ. ಹಾಗಾಗಿ, ಆಸಕ್ತ ನೌಕರರು ಗಡುವಿನೊಳಗೆ ಯುಪಿಎಸ್ ಆಯ್ಕೆ ಮಾಡಿಕೊಳ್ಳಬಹುದು. ಗಡುವು ಮುಗಿದ ಬಳಿಕ ಯುಪಿಎಸ್ ಆಯ್ಕೆಗೆ ಅವಕಾಶವಿರುವುದಿಲ್ಲ.
ಜೀವನ ಪ್ರಮಾಣಪತ್ರ ಸಲ್ಲಿಕೆ
ಪಿಂಚಣಿ ಪಡೆಯುವ ಸರ್ಕಾರಿ ನೌಕರರು ಕಡ್ಡಾಯವಾಗಿ ನವೆಂಬರ್ 30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಸಬೇಕಿದೆ. ಮಾಸಿಕ ಪಿಂಚಣಿ ಪಡೆಯಲು ವಾರ್ಷಿಕವಾಗಿ ಜೀವನ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಪಿಂಚಣಿ ಕಡಿತವಾಗುತ್ತದೆ. ಹಾಗಾಗಿ, ಪಿಂಚಣಿದಾರರು ನವೆಂಬರ್ 30ರೊಳಗೆ ಜೀವನ ಪ್ರಮಾಣಪತ್ರ ಸಲ್ಲಿಸಬೇಕಿದೆ.
ಇದನ್ನೂ ಓದಿ : ಕೃಷ್ಣನಗರಿಯಲ್ಲಿ ಮೋದಿ | ಭಗವದ್ಗೀತೆಯ 15ನೇ ಅಧ್ಯಾಯ ಪಠಿಸಿದ ಪ್ರಧಾನಿ



















