ಬೆಂಗಳೂರು : ಸರ್ಕಾರದ ವಿರುದ್ಧ ಸಾರಿಗೆ ನೌಕರರು ಇಂದು ಮತ್ತೆ ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿವಿಧ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಇಂದಿನಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ ಮಾಡಿ, ಮತ್ತೆ ಸರ್ಕಾರದ ತಲೆಬಿಸಿಗೆ ಕಾರಣವಾಗಿದ್ದಾರೆ.
ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಒಂದೆಡೆ ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ ಆಗಸ್ಟ್ 5 ರಿಂದ ಮುಷ್ಕರಕ್ಕೆ ಕರೆ ಕೊಟ್ಟಿದೆ, ಇನ್ನೊಂದೆಡೆ KSRTC ನೌಕರರ ಒಕ್ಕೂಟ ಮುಷ್ಕರಕ್ಕೆ ಮುಂದಾಗಿದೆ.
ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ನಾಲ್ಕೂ ನಿಗಮಗಳ ನೌಕರರು ಭಾಗಿಯಾಗಲಿದ್ದಾರೆ. 4 ವರ್ಷಗಳಿಂದ ವೇತನ ಹೆಚ್ಚಳದಲ್ಲಿ ತಾರತಮ್ಯ ಆಗುತ್ತಿದ್ದರೂ ಬಗೆಹರಿಸಿಲ್ಲ. ಸರ್ಕಾರ ಬಂದು ಎರಡು ವರ್ಷ ಕಳೆದಿದರೂ ನಮ್ಮಬೇಡಿಕೆ ಈಡೇರಿಸಿಲ್ಲ. ಸರ್ಕಾರ ಪ್ರಣಾಳಿಕೆಯಲ್ಲಿ ಕೊಟ್ಟ ಮಾತು ಉಲ್ಲಂಘಿಸಿದೆ ಎಂದು ಒಕ್ಕೂಟ ಆರೋಪಿಸಿದೆ.
ನೌಕರರ ಒಕ್ಕೂಟದ ಬೇಡಿಕೆಗಳೇನು ?
– ಸರ್ಕಾರ ಪ್ರನಾಳಿಕೆಯಲ್ಲಿ ನೀಡಿರುವ 7ನೇ ವೇತನ ಆಯೋಗ ಜಾರಿ ಮಾಡಬೇಕು.
– 38 ತಿಂಗಳ ಅರಿಯರ್ಸ್ ಬಿಡುಗಡೆ ಮಾಡಬೇಕು.
– ಸಾರಿಗೆ ಸಂಸ್ಥೆಯಲ್ಲಿ ಸಂಘಟನೆ ಉದ್ದೇಶಕ್ಕಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು.
– 2020 ಹಾಗೂ 2021 ರಲ್ಲಿ ನಡೆದ ಮುಷ್ಕರದಲ್ಲಿ ಭಾಗಿಯಾದ ನೌಕರರ ವಜಾ ಆದೇಶ ವಾಪಾಸ್ ಪಡೆಯಬೇಕು.
– ನೌಕರರ ಕುಟುಂಬಸ್ಥರ ಮೇಲೆ ನೀಡಿರೋ ಸುಳ್ಳು ಪೊಲೀಸ್ ಪ್ರಕರಣ ವಾಪಾಸ್ ಪಡೆಯಬೇಕು.