ಬೆಂಗಳೂರು: 18 ತಿಂಗಳ ಹಿಂದೆ ವೇತನ ಹೆಚ್ಚಳ ಮಾಡಿ ಅಂತ ಬೇಡಿಕೆ ಇಟ್ಟಿದ್ದೆವು, ಆದರೆ ಕೊನೆ ಕ್ಷಣದಲ್ಲಿ ಸಭೆ ಮಾಡಿದ್ದಾರೆ. ನಾವು ಅವರ ಯಾವ ಆಶ್ವಾಸನೆಗೂ ಒಪ್ಪುವುದಿಲ್ಲ ಎಂದು ಸಾರಿಗೆ ಸಂಘಟನೆ ಮುಖಂಡ ಮಂಜುನಾಥ್ ಹೇಳಿದ್ದಾರೆ.
ವರಿದಿಗಾರರಿಗೆ ಸ್ಪಂದಿಸಿದ ಅವರು, ವೇತನ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿಗಳು ಬಾಯಿ ತರೆಯುವುದಕ್ಕೂ ತಯಾರಿಲ್ಲ. ಮತ್ತೆ ಸರ್ಕಾರ ಮಾತುಕತೆಗೆ ಕರೆದರೆ ನಾವು ಬರುವುದಿಲ್ಲ. ಸಾರಿಗೆ ನಿಗಮಗಳ ನೌಕರರು ಮುಷ್ಕರ ಮಾಡಿ ನಿಮ್ಮ ಹಕ್ಕುಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಈ ಹಿಂದೆ ಹಲವು ಪ್ರತಿಭಟನೆ ಮಾಡಿದ್ದೇವೆ. ಯಾವುದೇ ಶಿಸ್ತು ಕ್ರಮ ತೆಗೆದುಕೊಂಡರೂ ಸಾರಿಗೆ ನೌಕರರು ಬಗ್ಗುವುದಿಲ್ಲ. ನಾವು ಪ್ರತಿಭಟನೆ ಮಾಡುವ ದಿನದ ಸಂಬಳ ಕೇಳುವುದಿಲ್ಲ ಯಾರೂ ಅದನ್ನು ನಿರೀಕ್ಷೆ ಮಾಡಬೇಡಿ. ನಮ್ಮ ರಕ್ಷಣೆ ನಾವು ಮಾಡಿಕೊಳ್ಳುವ. ಯಾರೂ ಹೆದರುವ ಅಗತ್ಯಬವಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ತಾತ್ಸಾರದ ಭಾವನೆ ಹೋಗಲಾಡಿಸಬೇಕಾಗಿದೆ. 38 ತಿಂಗಳ ಅರಿಯರ್ಸ್ ಕೊಡುವುದು ಸರ್ಕಾರಕ್ಕೆ ದೊಡ್ಡ ವಿಚಾರ ಅಲ್ಲ. ಈ ಹಿಂದೆಯೂ ನಮಗೆ ಭರವಸೆ ಕೊಟ್ಟು ಪ್ರಾಮಾಣಿಕತೆ ತೋರಿಲ್ಲ ಎಂದು ತಮ್ಮ ಅಸಮಾದಾನ ಹೊರಹಾಕಿದ್ದಾರೆ.
ನಮ್ಮ ಜಂಟಿ ಕ್ರಿಯಾ ಸಮಿತಿಯಿಂದ ಮುಷ್ಕರಕ್ಕೆ ಕರೆ ಕೊಡುತ್ತೇವೆ. ಇತರೆ ಸಂಘಟನೆಗಳು ಕೂಡ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಒಂದು ಲಕ್ಷ ಹದಿನೈದು ಸಾವಿರ ನೌಕರರು ಭಾಗಿಯಾಗುತ್ತಾರೆ. ಆಡಳಿತ ಪಕ್ಷದ ಯಾವುದೇ ಗೊಡ್ಡು ಬೆದರಿಕೆಗೂ ನಾವು ಹೆದರುವುದಿಲ್ಲ. ನೂರಕ್ಕೆ ನೂರು ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ.