ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಸಾರಿಗೆ ನೌಕರರ ಸಭೆಯನ್ನು ಕರೆದಿದ್ದರು. ಅವರಲ್ಲಿಯೇ ಎರಡು ಬಣಗಳಿವೆ, ೧೪ ಸಂಘ ಸಂಸ್ಥೆಗಳು ಇವೆ. ಜಂಟಿ ಕ್ರಿಯಾಸಮಿತಿ ಹಾಗೂ ನಿಗಮ ಸಂಘಟನೆಗಳ ಒಕ್ಕೂಟದ ಸದಸ್ಯರು ಸಭೆಗೆ ಬಂದಿದ್ದರು. 38 ತಿಂಗಳ ಪರಿಷ್ಕೃತ ವೇತನ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ರೆಡ್ಡಿ, ಶ್ರೀನಿವಾಸ್ ಅವರ ಶಿಫಾರಸಿನಂತೆ ಮಾರ್ಚ್ 23ರಿಂದ ಪರಿಷ್ಕರಣೆ ಆಗಬೇಕಂತ ಸರ್ಕಾರ ಆದೇಶ ಮಾಡಿತ್ತು. ಕೋವಿಡ್ ಸಮಯದಲ್ಲಿ ಸೂಕ್ತವಲ್ಲ. 14 ತಿಂಗಳು ವೇತನ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ. 718 ಕೋಟಿ ಆಗುತ್ತದೆ ಅದನ್ನು ನೀಡುವುದಾಗಿ ಸಿಎಂ ಹೇಳಿದ್ದಾರೆ. ಸಂಘಟನೆಯವರು ಅದಕ್ಕೆ ಒಪ್ಪಿಲ್ಲ ಎಂದಿದ್ದಾರೆ.
ಏಳು ಸಂಘ ಸಂಸ್ಥೆಗಳ ಕೂಟ ಅವರಿಗೆ ಚುನಾವಣೆ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಸಮಾನ ವೇತನ ನೀಡಿ ಎಂಬ ಬೇಡಿಕೆ ಇಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 14 ತಿಂಗಳು ವೇತನ ನೀಡುವುದಕ್ಕೆ ಒಪ್ಪಿದ್ದಾರೆ. ಎರಡನೇ ಬಣದವರು ಧರಣಿ ಕೂತಿದ್ದಾರೆ. ನಾಲ್ಕು ವರ್ಷಕ್ಕೊಮೆ ವೇತಮ ಪರಿಷ್ಕರಣೆ ಆಗಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ಹೇಳಿದ್ದಾರೆ.
ಎಸ್ಮಾ ಕಾನೂನು ೨೦೧೫ ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಲೆ ಬಂದಿದೆ. ಕೋರ್ಟ್ ಆದೇಶ ಕೊಟ್ಟ ಬಳಿಕ ಅವರು ಪ್ರತಿಭಟನೆ ಮಾಡುವುದಕ್ಕೆ ಆಗಲ್ಲ. ಅಧಿವೇಶನದ ಬಳಿಕ ಮಾತುಕತೆ ಮಾಡುವುದಾಗಿ ಹೇಳಿದ್ದರು. ಈಗ ಹೈಕೊರ್ಟ್ ನಲ್ಲಿ ಪಿಐಎಲ್ ಇದೆ ಎಂದು ಅವರು ವಿವರಿಸಿದರು.



















