ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಂಗಳಮುಖಿಯರ ಗ್ಯಾಂಗ್ ತಮ್ಮ ಜೊತೆಗಾತಿಯ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿದೆ. ಸುಕನ್ಯಾ ಎಂಬ ಮಂಗಳಮುಖಿಯ ತಲೆ ಬೋಳಿಸಿ ಹಲ್ಲೆ ಮಾಡಿ ಗ್ಯಾಂಗ್ ವಿಕೃತಿ ಮರೆದಿದೆ.
ತಮ್ಮ ಟೀಂ ಬಿಟ್ಟು ಬೇರೊಂದು ತಂಡ ಜೊತೆಗೆ ಹೋಗಿದ್ದಕ್ಕೆ ಆಕ್ರೋಶಗೊಂಡ ಮಂಗಳಮುಖಿಯರ ತಂಡ, ಸುಕನ್ಯಾಳನ್ನ ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೊಮ್ಮನಹಳ್ಳಿಗೆ ಕರೆದೊಯ್ದು ಹಲ್ಲೆ ಮಾಡಿದೆ.
ಸುಕನ್ಯಾ ಕೈಮುಗಿದು ಬೇಡಿಕೊಂಡ್ರು ಸಹ ಎಲ್ಲರೂ ಸೇರಿ ಹಿಟ್ಟಿನ ದೊಣ್ಣೆ , ಸೌಟು, ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ಮಂಗಳಮುಖಿಗೆ ತೋರಿಸಿದ್ದು, ಸದ್ಯ ಈ ವಿಡಿಯೋ ಕಾಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಬೊಮ್ಮನಹಳ್ಳಿ ಪೊಲೀಸರು ಸೊಮೋಟೋ ಕೇಸ್ ದಾಖಲಿಸಿಕೊಂಡು 7 ಮಂಗಳಮುಖಿಯರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಜಲಮಂಡಳಿ ನಿರ್ಲಕ್ಷ್ಯಕ್ಕೆ ಮ್ಯಾನ್ ಹೋಲ್‌ನಲ್ಲಿ ಕುಸಿದು ಬಿದ್ದ ಕಾರ್ಮಿಕರು | ಓರ್ವನ ಸ್ಥಿತಿ ಗಂಭೀರ!



















