ಬೆಂಗಳೂರು: ಈಗಾಗಲೇ ನಗರದೆಲ್ಲೆಡೆ ವರುಣಾರ್ಭಟದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೀಗ ಎಲೆಕ್ಟ್ರಾನಿಕ್ ಸಿಟಿ ಬಳಿಯ ಪ್ರಗತಿ ನಗರದಲ್ಲಿ ನೆನ್ನೆ ಸುರಿದ ಭಾರಿ ಮಳೆಗೆ ರಸ್ತೆಯ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಟ್ರಾನ್ಸ್ ಫರ್ಮ್ ಸ್ಫೋಟಗೊಂಡಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ, ಕೂಡಲೇ ಸ್ಥಳಿಯರು ಬೆಸ್ಕಾಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಆಗಮಿಸಿ ದುರಸ್ತಿ ಕಾರ್ಯ ಮುಂದುವರೆಸಿದ್ದಾರೆ.