ಹೊಸ ವರ್ಷದ ಹೊಸ್ತಿಲ್ಲಲೇ ಸರ್ಕಾರವು ಗೃಹ ಇಲಾಖೆಗೆ ಸರ್ಜರಿ ಮಾಡಿದ್ದು, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.
ಹೊಸ ವರ್ಷದ ಮುನ್ನಾ ದಿನವೇ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಹೊಸ ವರ್ಷದಂದು ಕೆಲವು ಅಧಿಕಾರಿಗಳು ಹೊಸ ಜಾಗದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ.
ಸರ್ಕಾರ ಹೊರಡಿಸಿದೆ ಆದೇಶದಲ್ಲಿ ವರ್ಗಾವಣೆಯಾದ ಅಧಿಕಾರಿಗಳನ್ನು ನೋಡುವುದಾದರೆ…
ರಮಣ್ ಗುಪ್ತಾ – ಇಂಟಲಿಜೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ವರ್ಗಾವಣೆ
ಚೇತನ್ ಸಿಂಗ್ ರಾಥೋಡ್-ಈಶಾನ್ಯ ವಲಯ, ಬೆಳಗಾವಿ ಐಜಿಪಿಯಾಗಿ ವರ್ಗಾವಣೆ
ವಿಕಾಸ್ ಕುಮಾರ್ ವಿಕಾಸ್- ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ ಬೆಂಗಳೂರು
ಅಮಿತ್ ಸಿಂಗ್- ಮಂಗಳೂರು ವಲಯದ ಐಜಿಪಿಯಾಗಿ ವರ್ಗಾವಣೆ
ವಂಶಿಕೃಷ್ಣ – ನೇಮಕಾತಿ ಡಿಐಜಿಯಾಗಿ ವರ್ಗಾವಣೆ
ಕಾರ್ತಿಕ್ ರೆಡ್ಡಿ-ರಾಮನಗರ ಎಸ್ಪಿಯಾಗಿ ಮುಂದುವರಿಕೆ
ಕುಲದೀಪ್ ಕುಮಾರ್ ಜೈನ್- ಡಿಐಜಿಯಾಗಿ ಮುಂಬಡ್ತಿ, ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ನೇಮಕ
ಸಂತೋಶ್ ಬಾಬು- ಡಿಐಜಿಯಾಗಿ ಮುಂಬಡ್ತಿ(ಐಬಿ)
ಇಶಾ ಪಂಥ್- ಡಿಐಜಿಯಾಗಿ ಮುಂಬಡ್ತಿ(ಐಬಿ)
ಸಂಗೀತಾ-ಡಿಐಜಿಯಾಗಿ ಮುಂಬಡ್ತಿ, (ಸಿಐಡಿ ಫಾರೆಸ್ಟ್ ಸೆಲ್ ಡಿಐಜಿಯಾಗಿ ನೇಮಕ)
ಸೀಮಾ ಲಾಟ್ಕರ್- ಡಿಐಜಿಯಾಗಿ ಮುಂಬಡ್ತಿ, ಮೈಸೂರು ಕಮಿಷನರ್ ಆಗಿ ನೇಮಕ
ರೇಣುಕಾ ಕೆ ಸುಕುಮಾರ್-ಡಿಐಜಿಯಾಗಿ ಮುಂಬಡ್ತಿ, (ಡಿಸಿಆರ್ ಇ ಬೆಂಗಳೂರು)
ಅಲ್ಲದೇ, ಇದೇ ವೇಳೆ 50 ಜನ ಎಸ್ಪಿಗಳಿಗೆ ಎಸ್ ಎಸ್ ಪಿಯಾಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರವು ಹಲವು ಅಧಿಕಾರಿಗಳು ಸಿಹಿ ಸುದ್ದಿ ನೀಡಿದೆ.