ಬೆಳಗಾವಿ: ಮಹಾ ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ತಾಯಿ ಹಾಗೂ ಮಗಳಿಗಾಗಿ ನಾಯಿ ಕಾಯುತ್ತಿದೆ. ಆದರೆ, ಅವರು ಇಹಲೋಕ ತ್ಯಜಿಸಿದ್ದು, ನಾಯಿ ಊಟ ಮಾಡದೆ ಕಂಗಾಲಾಗಿ ಕುಳಿತಿದೆ. ನಾಯಿಯ ಸ್ಥಿತಿ ಕಂಡು ಜನ ಮಮ್ಮಲ ಮರಗುತ್ತಿದ್ದಾರೆ.
ಕಾಲ್ತುಳಿತದಲ್ಲಿ ಬೆಳಗಾವಿ ಜಿಲ್ಲೆಯ ವಡಗಾವಿಯ ಮೇಘಾ ಹತ್ತರವಾಟ ಹಾಗೂ ಜ್ಯೋತಿ ಹತ್ತರವಾಟ ಸಾವನ್ನಪ್ಪಿದ್ದಾರೆ. ಆದರೆ, ಈ ವಿಷಯ ನಾಯಿಗೆ ತಿಳಿದಿದೆಯೋ ಗೊತ್ತಿಲ್ಲ. ಅದು ಮಾತ್ರ ಆಹಾರ ಸೇವಿಸದೆ, ಮಂಕಾಗಿ ಕುಳಿತಿದೆ.
ತಾಯಿ ಹಾಗೂ ಮಗಳು ಪ್ರಯಾಗರಾಜ್ ಗೆ ಹೋದಾಗಿನಿಂದಲೂ ಶ್ವಾನ ಮಂಕಾಗಿ ಕುಳಿತಿದೆ. ಅವರು ಕುಂಭಮೇಳಕ್ಕೆ ತೆರಳಿದ ದಿನ ಸಹ ಶ್ವಾನ ಆಹಾರ ತ್ಯೆಜಿಸಿತ್ತು. ಈ ಮೂಲಕ ಶ್ವಾನ ದುರಂತದ ಮುನ್ಸೂಚನೆ ಅರಿತಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಮೇಘಾಳ ಹಠಕ್ಕಾಗಿ ಪ್ರಯಾಗರಾಜ್ ಕಳಿಸುವಂತಾಯಿತು. ಶ್ವಾನದ ಮುನ್ಸೂಚನೆ ಬಗ್ಗೆ ಇದ್ದರೂ ನಾವು ನಿರ್ಲಕ್ಷ್ಯ ಮಾಡಿದೇವು ಎಂದು ಮೇಘಾಳ ತಂದೆ ದೀಪಕ ಹತ್ತರವಾಟ ಕಣ್ಣೀರು ಸುರಿಸಿದ್ದಾರೆ.