ಬೆಂಗಳೂರು : ಕೆಐಎಎಲ್ ಏರ್ಪೋಟ್ ರಸ್ತೆಯಲ್ಲಿ ಬೆಳಗಿನ ಜಾವ ಭಾರಿ ವಾಹನಗಳ ಸಂಚಾರವಾಗುತ್ತಿದ್ದು, ಜನ ಸಾಮಾನ್ಯರಿಗೆ ಕಿರಿಕಿರಿ ಉಂಟಾಗಿದೆ. ಈ ಬಗ್ಗೆ ಕ್ರಿಕೆಟರ್ ಸುನೀಲ್ ಜೋಶಿ ಎಕ್ಸ್‌ನಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣ ಮಾರ್ಗದಲ್ಲಿ ದಿನದ ವೇಳೆಯಲ್ಲೂ ಸರಕು ಮತ್ತು ನಿರ್ಮಾಣ ವಾಹನಗಳನ್ನು ಹೇಗೆ ಅನುಮತಿಸಲಾಗುತ್ತಿದೆ? ಇವುಗಳಿಗೆ ರಾತ್ರಿ10 ರಿಂದ ಬೆಳಗ್ಗೆ 6 ರವರೆಗೆ ಮಾತ್ರ ಚಾಲನೆಗೆ ಅನುಮತಿ ಇರಬೇಕು ಅಲ್ಲವೇ.?ಈಗ ಈ ವಾಹನಗಳು ಫಾಸ್ಟ್ ಲೇನ್‌ಗಳನ್ನು ಬಂದ್ ಮಾಡುತ್ತಿವೆ. ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಅಥವಾ ಬರುವ ಪ್ರಯಾಣಿಕರಿಗೆ ಭಾರೀ ಟ್ರಾಫಿಕ್ ಜಾಮ್ ಆಗುತ್ತಿದೆ. ಎಂದು ಬರೆದುಕೊಂಡಿದ್ದಾರೆ.

ದಯವಿಟ್ಟು ಈ ಕುರಿತು ಕ್ರಮ ಕೈಗೊಳ್ಳಿ, ಸಾಮಾನ್ಯ ಜನರು ಪ್ರಯಾಣಿಸಲು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಎಕ್ಸ್ ನಲ್ಲಿ ಬರೆದು ಸಿಎಂ, ಡಿಸಿಎಂಗೆ ಟ್ಯಾಗ್ ಮಾಡಿದ್ದಾರೆ.