ಶಿವಮೊಗ್ಗ : ಜಗತ್ಪ್ರಸಿದ್ಧ ಸಾಗರ ತಾಲೂಕಿನ ಜೋಗ ಜಲಪಾತ ನೋಡುವುದಕ್ಕಾಗಿ ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಮಲೆನಾಡು ಪ್ರದೇಶಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಮಳೆಗಾಲ, ಜಲಪಾತಗಳನ್ನು ಇಷ್ಟಪಡುವ ಮಂದಿ ಈಗ ಜೋಗದತ್ತ ಪ್ರವಾಸ ಬೆಳೆಸುತ್ತಿದ್ದಾರೆ.
ಜೋಗ ರಸ್ತೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಜೋಗದ ವೈಭವ ನೋಡಲು ಆಸೆ ಕಂಗಳಿಂದ ಬಂದಿದ್ದ ಪ್ರವಾಸಿಗರಿಗೆ ತುಸು ಭ್ರಮನಿರಸನ ಉಂಟಾಗಿದೆ.
ಜೋಗ ಜಲಪಾತದ ಹಳೆಯ ವಿಡಿಯೋ ತುಣುಕು ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಜಾ ರಾಣಿ ರೋರಲ್ ರಾಕೆಟ್ ಗಳ ಭೋರ್ಗರೆತದ ವಿಡಿಯೋಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಕೂಡ ಮಾರು ಹೋಗಿದ್ದಾರೆ.
ವೀಕೆಂಡ್ ಮೂಡಿನಲ್ಲಿದ್ದ ಪ್ರವಾಸಿಗರು ಜೋಗಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟನೆ ಉಂಟಾಗಿದ್ದು, ನಿನ್ನೆ ಸಂಜೆ ವೇಳೆ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಮತ್ತು ಪ್ರಾದಿಕಾರದ ಸಿಬ್ಬಂದಿಗಳಿಂದ ಹರಸಾಹಸ ಪಟ್ಟ ದೃಶ್ಯ ಕಂಡು ಬಂತು. ಜೋಗದಲ್ಲಿ ನೂರಾರು ಕೋಟಿಯ ಅಭಿವೃದ್ಧಿಯ ಸಾಗುತ್ತಿರುವ ಹಿನ್ನಲೇ ಪಾರ್ಕಿಂಗ್ ಗೂ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಪ್ರವಾಸಿಗರಲ್ಲೂ ಬೇಸರ ಮೂಡಿದೆ.



















