ಮಂಗಳೂರು : ಕರಾವಳಿ ಭಾಗದಲ್ಲಿ ಕೇರಳ, ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಮಂಗಳೂರು ಜನ ಮುಂಬೈ ದುಬೈ ಬೆಂಗಳೂರು ಹೋಗುತ್ತಾರೆ. ಇಲ್ಲಿನ ಪ್ರಕೃತಿ ಸಂಪತ್ತು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಡಿಸಿಎಂ, ಮಂಗಳೂರು ಜನ ಮುಂಬೈ ದುಬೈ ಬೆಂಗಳೂರು ಹೋಗುತ್ತಾರೆ. ಇಲ್ಲಿನ ಪ್ರಕೃತಿ ಸಂಪತ್ತು ಸರಿಯಾಗಿ ಬಳಸಿಕೊಂಡಿಲ್ಲ. ಇಲ್ಲಿನ ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ. ಬಹಳ ಆಸಕ್ತಿ ತೋರಿಸಿದ್ದಾರೆ. ಟೂರಿಸಂ ಪಾಲಿಸಿ ಬಗ್ಗೆ ಚರ್ಚೆ ಮಾಡಿದ್ದೇವೆ. ಇಲ್ಲಿಗೆ ಏನಾದರೂ ವಿಶೇಷ ಯೋಜನೆ ಮಾಡಬೇಕು ಎಂದಿದ್ದಾರೆ.
ಬಹಳ ಜನ ವಿದೇಶ ಮುಂಬೈ ಬೆಂಗಳೂರು ಉದ್ಯಮಿಗಳು ಸ್ವಂತ ಊರಿಗೆ ಬರಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಹಕಾರ ಕೊಡುತ್ತೇವೆ ಹೂಡಿಕೆ ಮಾಡುತ್ತೇವೆ ಎಂದಿದ್ದಾರೆ. ಇಲ್ಲಿನ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಯಾಗುತ್ತದೆ. ಇಲ್ಲಿನ ಯುವಕರು ಪ್ರಜ್ಞಾವಂತರಿದ್ದಾರೆ. ವಿದೇಶಗಳಿಗೆ ಉದ್ಯೋಗಕ್ಕೆ ಹೋಗುವುದರ ಬದಲು ಇಲ್ಲೇ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕರಾವಳಿಗೆ ಟೂರಿಸಂ ಪಾಲಿಸಿ ಮಾಡುತ್ತವೆ. ಉದ್ಯಮಿಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಮಸ್ಯೆ ಏನಿದೆ ಸರ್ಕಾರ ಯಾವ ರೀತಿ ಸಹಾಯ ಮಾಡಬಹುದು ಪರಿಶೀಲನೆ ಮಾಡ್ತೇವೆ. ಖಾಸಗಿ ಸಹ ಭಾಗಿತ್ವ ಕೂಡ ಬೇಕಾಗುತ್ತೆ. ಉದ್ಯಮಿಗಳು ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಎಲ್ಲರೂ ಅವರ ಅಭಿಪ್ರಾಯ ತಿಳಿಸಬೇಕು. ಸಿ ಆರ್ ಜೆಡ್, ಡಿಫೆನ್ಸ್ ,ಕೋಸ್ಟಲ್ ಪೊಲೀಸ್ ಎಲ್ಲರನ್ನು ಕರೆದಿದ್ದೇವೆ. ಒಂದು ಫೈವ್ ಸ್ಟಾರ್ ಹೋಟೆಲ್ ಕೂಡ ಇಲ್ಲ ಎಲ್ಲವೂ ಆಗ್ಬೇಕು ಎಂದಿದ್ದಾರೆ.
ಇದನ್ನೂ ಓದಿ : ‘ರಾಜ್ಯದಲ್ಲಿ ಸಿಎಂಗೆ ಒಂದು ಕಾನೂನು ಶಾಸಕಿಗೆ ಒಂದು ಕಾನೂನಾ?’ | ನಳಿನ್ ಕುಮಾರ್ ಆಕ್ರೋಶ



















