ಉದ್ಯಮಿಯೊಬ್ಬರು ಹಣಕ್ಕಾಗಿ ಪ್ರೆಯಸಿಯ ಬ್ಲಾಕ್ ಮೇಲ್ ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಗೆಳತಿಯ ಬ್ಲಾಕ್‌ಮೇಲ್ ಕಾಟಕ್ಕೆ ಬೇಸತ್ತು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮಿ ಮನೋಜ್ ಕುಮಾರ್ (34) ಸೈರ್‌ಪುರ ಪ್ರದೇಶದ ಹೋಟೆಲ್ ನಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಆ ಲೆಟರ್ ನಲ್ಲಿ ಉದ್ಯಮಿ ತಾನು ಪ್ರೀತಿಸಿದಾಕೆಯಿಂದ ಮೋಸ ಹೋಗಿರುವುದಾಗಿ ಬರೆದುಕೊಂಡಿದ್ದಾರೆ. ನನ್ನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲದೆ ಹಣಕ್ಕಾಗಿ ಪದೇ ಪದೇ ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು. ನಾನು ನನ್ನ ಫ್ಲಾಟ್ ನ್ನು 7 ಲಕ್ಷ ರೂ. ಗೆ ಮಾರಿ ಆ ಹಣ ನೀಡಿದ್ದೆ. ಆದರೂ ಅವಳ ಹಣದ ದಾಹ ಮುಗಿದಿಲ್ಲ. ಹೀಗಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದೇನೆ. ನನ್ನ ಈ ಸಾವಿಗೆ ನ್ಯಾಯ ಸಿಗುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲʼ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.
ವಾಣಿ ಮೆಹ್ರೋತ್ರಾ (vani_mehrotra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಹಂಚಿಕೊಂಡಿದ್ದಾರೆ.