ಬೆಂಗಳೂರು: ಮಾಂಸದ ಅಂಗಡಿಯೊಂದರಲ್ಲಿ (Beef Stall) ಪಾರ್ಟರ್ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ (Bengaluru) ಬೇಗೂರಿನಲ್ಲಿ (Begur) ಈ ಘಟನೆ ನಡೆದಿದೆ. ಅಫ್ಸರ್ (45) ಅಂಗಡಿ ಮಾಲೀಕನಿಂದ ಕೊಲೆಯಾಗಿರುವ ವ್ಯಕ್ತಿ. ಅಫ್ಸರ್ ಬೆಂಗಳೂರಿನ ಶಿವಾಜಿನಗರ ನಿವಾಸಿಯಾಗಿದ್ದ. ಕಳೆದ 8 ತಿಂಗಳ ಹಿಂದೆ ಅಕ್ಬರ್ ಹಾಗೂ ಅಫ್ಸರ್ ಅಂಗಡಿ ಆರಂಭಿಸಿದ್ದರು. ಆದರೆ, ವ್ಯಾಪಾರ ಸರಿಯಾಗಿ ನಡೆಯುತ್ತಿರಲಿಲ್ಲ. ಹೀಗಾಗಿ ಅಕ್ಬರ್ ಬೇರೆ ಅಂಗಡಿ ತೆರೆಯಲು ನಿರ್ಧರಿಸಿದ್ದ. ಹೀಗಾಗಿ ಬಂಡವಾಳದ ಹಣ ವಾಪಸ್ ನೀಡುವಂತೆ ಅಫ್ಸರ್ ನನ್ನು ಕೇಳಿದ್ದ. ಅಫ್ಸರ್ ಸುಮಾರು 3 ಲಕ್ಷ ಹಣ ವಾಪಸ್ ನೀಡಿದ್ದ. ಇನ್ನುಳಿದ ಬಾಕಿ 20 ಸಾವಿರ ರೂ. ನೀಡುವಂತೆ ಅಕ್ಬರ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತೆರಳಿ ಅಕ್ಬರ್ ಅಂಗಡಿಯಲ್ಲಿದ್ದ ಮಚ್ಚಿನಿಂದಲೇ ಅಫ್ಸರ್ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಅಫ್ಸರ್ ಅಂಗಡಿಯಲ್ಲೇ ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.