ಬೆಂಗಳೂರು : ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಸರ್ವರಿಗೂ ಪ್ರೇರಣೆಯಾಗುವ ಕಾರ್ಯಕ್ರಮವನ್ನು ನಗರದ ಮಲ್ಲೇಶ್ವರಂನಲ್ಲಿ ಆಯೋಜಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ, ಮಲ್ಲೇಶ್ವರಂನ ಬಿಜೆಪಿ ಶಾಸಕ ಡಾ ಸಿ.ಎನ್ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ “ಸ್ಟ್ಯಾಚ್ಯೂ ಆಫ್ ಇನ್ಸ್ಪಿರೇಶನ್” ಎಂಬ ಹೆಸರಿನಲ್ಲಿ ದಿ. ನಟ ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿ ನಾಳೆ (ಮಾರ್ಚ್ 20) ಅನಾವರಣಗೊಳ್ಳಲಿದೆ.
ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುವ ಅಪ್ಪು ಅವರ ಸ್ಮರಣೆಯನ್ನು ಮತ್ತಷ್ಟು ವಿಶೇಷವಾಗಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ 5 ಗಂಟೆಗೆ ಈ ಮಹತ್ವದ ಪುತ್ಥಳಿ ಅನಾವರಣ ನಡೆಯಲಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ಯಾಂಕಿ ಕೆರೆ ಮುಂಭಾಗದ ತ್ರಿಕೋನ ಉದ್ಯಾನವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುವ ಅಪ್ಪು ಅವರ ಸ್ಮರಣೆಯನ್ನು ಮತ್ತಷ್ಟು ವಿಶೇಷವಾಗಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕೇವಲ ಪುತ್ಥಳಿ ಅನಾವರಣ ಮಾತ್ರವಲ್ಲ, ಅಪ್ಪು ಅವರ ಆದರ್ಶಗಳನ್ನು ಸ್ಮರಿಸುವ ಕ್ಷಣವೂ ಆಗಿದೆ. ಅವರ ಜೀವನದ ಸಂದೇಶಗಳನ್ನು ಜನರಿಗೆ ತಲುಪಿಸಿ, ಸಮಾಜದಲ್ಲಿ ಉತ್ತಮ ಬದಲಾವಣೆಗೆ ಪ್ರೇರಣೆ ನೀಡುವ ಮಹತ್ವದ ಪ್ರಯತ್ನ ಇದಾಗಿದೆ.
ಇದನ್ನೂ ಓದಿ : ಉದ್ಯೋಗಿಗಳ ಪಿಂಚಣಿ ಏರಿಕೆಗೆ ಸಂಸದೀಯ ಸಮಿತಿ ಶಿಫಾರಸು.. ಎಷ್ಟಾಗಲಿದೆ?


















