ನವದೆಹಲಿ: ಯುವಕರು ಉದ್ಯೋಗಾವಕಾಶ, ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗದ ಅನುಭವ ಪಡೆಯಲಿ ಎಂದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆ (PM Internship Scheme 2025) ಜಾರಿಗೆ ತಂದಿದೆ. ಯೋಜನೆ ಅನ್ವಯ ಯುವಕ-ಯುವತಿಯರಿಗೆ ಸ್ಟೈಪೆಂಡ್ ನೀಡುವ ಜತೆಗೆ ಮುಂದಿನ ಐದು ವರ್ಷಗಳಲ್ಲಿ ಭಾರತದ ಪ್ರಮುಖ 500 ಕಂಪನಿಗಳಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇನ್ನು 2025ನೇ ಸಾಲಿನಲ್ಲಿ ಯೋಜನೆಗೆ ಅರ್ಜಿ ಹಾಕಲು ಮಾರ್ಚ್ 31 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸ್ಟೆಪ್ ಬೈ ಸ್ಟೆಪ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ಟೆಪ್ 1- ಅಧಿಕೃತ ವೆಬ್ ಸೈಟ್ pminternship.mca.gov.in ಗೆ ಭೇಟಿ ನೀಡಿ
ಸ್ಟೆಪ್ 2- ಹೋಮ್ ಪೇಜ್ ನಲ್ಲಿ ರಿಜಿಸ್ಟರ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3- ಹೊಸ ಪೇಜ್ ಓಪನ್ ಆಗುತ್ತದೆ
ಸ್ಟೆಪ್ 4- ನೋಂದಣಿ ಮಾಹಿತಿ ಭರ್ತಿ ಮಾಡಿ, ಸಬ್ ಮಿಟ್ ಕೊಡಿ
ಸ್ಟೆಪ್ 5- ಅಭ್ಯರ್ಥಿಗಳು ನೀಡಿದ ಮಾಹಿತಿ ಅನ್ವಯ ರೆಸ್ಯೂಮ್ ಕ್ರಿಯೇಟ್ ಆಗಿರುತ್ತದೆ
ಸ್ಟೆಪ್ 6- ಸ್ಥಳ, ವಲಯ, ಕೆಲಸ, ವಿದ್ಯಾರ್ಹತೆ ಸೇರಿ ವಿವಿಧ ಮಾಹಿತಿ ನೀಡಿ
ಸ್ಟೆಪ್ 7- ಅಪ್ಲಿಕೇಶನ್ ಫಾರಂ ಸೇವ್ ಮಾಡಿಟ್ಟುಕೊಳ್ಳಿ
ಮಾಸಿಕ 5 ಸಾವಿರ ರೂ. ಸ್ಟೈಪೆಂಡ್
ಇಂಟರ್ನ್ ಶಿಪ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 5 ಸಾವಿರ ರೂಪಾಯಿ ಸ್ಟೈಪೆಂಡ್ ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 60 ಸಾವಿರ ರೂಪಾಯಿ ಸಿಗುತ್ತದೆ. ಇದು ಆರ್ಥಿಕ ನೆರವಿನ ಅಡಿಯಲ್ಲಿ ಬರುತ್ತದೆ. ಅಲ್ಲದೆ, ಕಂಪನಿಗೆ ಸೇರುವ ಮೊದಲು, ಒಂದು ಬಾರಿಯ ಅನುದಾನ 6 ಸಾವಿರ ರೂ. ನೀಡಲಾಗುವುದು. ವರ್ಷದಲ್ಲಿ ಒಟ್ಟು 66 ಸಾವಿರ ಲಭಿಸುತ್ತದೆ. ಇಂಟರ್ನ್ ಶಿಪ್ ಮಾಡುವವರಿಗೆ ವೈಯಕ್ತಿಕ ವಿಮಾ ಸೌಲಭ್ಯವೂ ಇರುತ್ತದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಂತಹ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ವಿಮೆ ಲಭ್ಯವಿದೆ. ಪ್ರೀಮಿಯಂ ಅನ್ನು ಕೂಡ ಸರ್ಕಾರವೇ ಪಾವತಿಸುತ್ತದೆ.
ಭಾರತೀಯ ಪ್ರಜೆಯಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ನಿಮ್ಮ ವಯಸ್ಸು 21 ರಿಂದ 24 ವರ್ಷದೊಳಗೆ ಇರಬೇಕು. ನೀವು ಈಗಷ್ಟೇ ಕೋರ್ಸ್ ಮುಗಿಸಿರಬೇಕು ಹಾಗೂ ಕೆಲಸ ಮಾಡುತ್ತಿರಬಾರದು. ಎಸ್ ಎಸ್ ಎಲ್ ಸಿ, ಐಟಿಐ, ಪಾಲಿಟೆಕ್ನಿಕ್, ಬಿಎ, ಬಿಎಸ್ ಸಿ, ಬಿ ಫಾರ್ಮಸಿ, ಬಿಬಿಎ ಸೇರಿ ಹಲವು ಪದವಿಗಳನ್ನು ಹೊಂದಿರುವ ಯಾರಾದರೂ ಅರ್ಜಿ ಸಲ್ಲಿಸಬಹುದು. ಇದು ಒಂದು ವರ್ಷದ ಇಂಟರ್ನ್ ಶಿಪ್ ಯೋಜನೆಯಾಗಿದೆ.