ಬೆಂಗಳೂರು: ನಾಳೆ (ಆದಿತ್ಯವಾರ, ಸೆ.07) ರಾತ್ರಿ ನಭೋ ಮಂಡಲದಲ್ಲಿ ಕೌತುಕದ ರಕ್ತ ಚಂದನ ಚಂದ್ರ ಗ್ರಹಣ ಸಂಭವಿಸಲಿದೆ. ಸುದೀರ್ಘ 3 ಗಂಟೆ 28 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ. ಗ್ರಹಣದ ವೇಳೆ ನಮ್ಮಲ್ಲಿ ಗ್ರಹ ಗತಿಗಳ ಬದಲಾವಣೆ ಆಗುತ್ತದೆ ಎನ್ನುವ ನಂಬಿಕೆಯೂ ದಟ್ಟವಾಗಿದೆ.
ಹಿಂದೂ ಧರ್ಮದಲ್ಲಿ ಚಂದ್ರ ಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಖಗೋಳ ಘಟನೆಯಾಗಿದ್ದು, ಇದು ಧಾರ್ಮಿಕ ಮಹತ್ವವನ್ನು ಸಹ ಹೊಂದಿದೆ. ಭಾದ್ರಪದ ಪೂರ್ಣಿಮೆ ಸೆಪ್ಟೆಂಬರ್ 7ರಂದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರ ಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ.
ಭಾರತದಲ್ಲಿ ಗೋಚರಿಸುವುದರಿಂದ, ಅದರ ಸೂತಕ ಅವಧಿಯು ಸಹ ಮುಖ್ಯವಾಗುತ್ತದೆ. ಸೂತಕ ಅವಧಿಯಲ್ಲಿ, ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಯುವುದಿಲ್ಲ. ವರ್ಷದ ಎರಡನೇ ಚಂದ್ರ ಗ್ರಹಣದ ಸಮಯ ಯಾವುದು, ಯಾವ ಸಮಯದಲ್ಲಿ ಉತ್ತುಂಗದಲ್ಲಿರುತ್ತದೆ ಮತ್ತು ಸೂತಕ ಅವಧಿ ಸೇರಿದಂತೆ 5 ವಿಶೇಷ ವಿಷಯಗಳನ್ನು ತಿಳಿಯಿರಿ.
- ಚಂದ್ರಗ್ರಹಣ ಎಷ್ಟು ಸಮಯದಿಂದ ಎಷ್ಟು ಸಮಯದವರೆಗೆ ಇರಲಿದೆ ?
ಚಂದ್ರ ಗ್ರಹಣವು ಸೆ. 7ರಂದು ಭಾದ್ರಪದ ಪೂರ್ಣಿಮೆಯ ದಿನ ರಾತ್ರಿ 09:57ಕ್ಕೆ ಪ್ರಾರಂಭವಾಗಿ ಸೆ. 8 ರಂದು ಬೆಳಿಗ್ಗೆ 01:26 ರವರೆಗೆ ಇರಲಿದೆ. ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 29 ನಿಮಿಷಗಳು.
- “ಚಂದ್ರಗ್ರಹಣ ಯಾವ ಸಮಯದಲ್ಲಿ ಉತ್ತುಂಗದಲ್ಲಿರಲಿದೆ ?”
ವೈದಿಕ ವಿಜ್ಞಾನದ ಪ್ರಕಾರ, ಈ ಚಂದ್ರ ಗ್ರಹಣ ರಾತ್ರಿ 11 ರಿಂದ 12:22 ರವರೆಗೆ ಉತ್ತುಂಗದಲ್ಲಿರುತ್ತದೆ. - “ಚಂದ್ರಗ್ರಹಣದ ಸೂತಕ ಅವಧಿ ಯಾವಾಗ ಪ್ರಾರಂಭ?”
ಚಂದ್ರಗ್ರಹಣದ ಸೂತಕ ಅವಧಿ ಸೆ. 7ರ ಮಧ್ಯಾಹ್ನ 12:57ಕ್ಕೆ ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ತಕ್ಷಣ ಸೂತಕ ಅವಧಿ ಮುಕ್ತಾಯಗೊಳ್ಳುತ್ತದೆ. - “ಚಂದ್ರಗ್ರಹಣದ ಸಮಯದಲ್ಲಿ ಹೇಗಿರಬೇಕು ?:”
ವೈದಿಕ ವಿಜ್ಞಾನದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಬೇಯಿಸಬಾರದು ಅಥವಾ ತಿನ್ನಬಾರದು. ಈ ಸಮಯದಲ್ಲಿ, ಸೂಜಿ, ಕತ್ತರಿ ಮತ್ತು ಚಾಕು ಮುಂತಾದ ಯಾವುದೇ ಚೂಪಾದ ವಸ್ತುಗಳನ್ನು ಬಳಸಬಾರದು. ಗ್ರಹಣದ ಸಮಯದಲ್ಲಿ ಪೂಜೆಯನ್ನು ನಿಷೇಧಿಸಲಾಗಿದೆ.
5. ”ಭಾರತದಲ್ಲಿ ಚಂದ್ರ ಗ್ರಹಣ ಎಲ್ಲಿ ಗೋಚರಿಸಲಿದೆ ?:”
ಭಾರತ ಸೇರಿದಂತೆ ಪ್ರಪಂಚದ ಹಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ, ಲಕ್ನೋ, ಹೈದರಾಬಾದ್ ಮತ್ತು ಚಂಡೀಗಢದಲ್ಲಿ ಗೋಚರಿಸಲಿದೆ. ಮಾತ್ರವಲ್ಲದೆ, ಆಸ್ಟ್ರೇಲಿಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ನ್ಯೂಜಿಲೆಂಡ್, ಫಿಜಿ ದ್ವೀಪಸಮೂಹ ಹಾಗೂ ಅಂಟಾರ್ಕ್ಟಿಕಾದ ಕೆಲವು ಭಾಗಗಳಲ್ಲಿ ಈ ಗ್ರಹಣ ಗೋಚರವಾಗಲಿದೆ.