‘ದಿ ಫ್ಯಾಮಿಲಿ ಮ್ಯಾನ್‘ ವೆಬ್ ಸೀರೀಸ್ ನಿರ್ದೇಶಕ ರಾಜ್ ನಿಡಿಮೋರು ಅವರ ಜೊತೆಗೆ ಸಮಂತಾ ವಿವಾಹವಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಕೊಯಮತ್ತೂರಿನ ಇಶಾ ಯೋಗ ಕೇಂದ್ರದೊಳಗಿನ ಭೈರವಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ ಎಂದು ವರದಿಯಾಗಿದೆ.

ಈ ಮದುವೆಯಲ್ಲಿ ಕೇವಲ 30 ಅತಿಥಿಗಳು ಮಾತ್ರ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಸಾಕಷ್ಟು ಗೌಪ್ಯವಾಗಿ ಯಾವುದೇ ಮತ್ತು ಸರಳವಾಗಿ ಈ ಮದುವೆ ಸಮಾರಂಭ ನಡೆದಿದೆಯಂತೆ. ಆದರೆ ಇದುವರೆಗೂ ಈ ಬಗ್ಗೆ ಎಲ್ಲಿಯೂ ರಾಜ್ ಆಗಲಿ, ಸಮಂತಾ ಆಗಲಿ ಏನೊಂದು ಮಾಹಿತಿಯನ್ನು ಕೂಡ ಹಂಚಿಕೊಂಡಿಲ್ಲ.

ಟಾಲಿವುಡ್ ನಟ ನಾಗ ಚೈತನ್ಯ ಅವರನ್ನು ನಟಿ ಸಮಂತಾ ಅವರು ಪ್ರೀತಿಸಿ ಮದುವೆ ಆಗಿದ್ದರು. ಹಲವು ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ, ಬಳಿಕ ಕುಟುಂಬದವರನ್ನು ಒಪ್ಪಿಸಿ, ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡು ದೂರವಾದರು. ನಟಿ ಶೋಭಿತಾ ಧುಲಿಪಾಲ ಅವರನ್ನು ನಾಗ ಚೈತನ್ಯ ಕಳೆದ ವರ್ಷ ಮದುವೆ ಆಗಿದ್ದಾರೆ. ಇನ್ನು, ರಾಜ್ ನಿಡಿಮೋರು ಅವರು ಶ್ಯಾಮಿಲಿ ಡೇ ಎಂಬುವರನ್ನು ಮದುವೆಯಾಗಿ ಅವರಿಂದ ದೂರವಾಗಿದ್ದಾರೆ. 2015ರಲ್ಲಿ ಮದುವೆಯಾದ ರಾಜ್ ಮತ್ತು ಶ್ಯಾಮಿಲಿ ಅವರು 2022ರಲ್ಲಿ ಡಿವೋರ್ಸ್ ಪಡೆದುಕೊಂಡರು. ಇದೀಗ ಸಮಂತಾ ಮತ್ತು ರಾಜ್ ಅವರು ಹೊಸ ಜೀವನ ಶುರು ಮಾಡುತ್ತಿದ್ದಾರೆ.
ಇದನ್ನೂ ಓದಿ : ‘ಹಾರ್ಟ್ ಬೀಟ್’ ಮೆಡಿಕಲ್ ಲವ್ ಡ್ರಾಮಾ!



















