ಬೆಂಗಳೂರು: ಇಂದು ಶುಕ್ರವಾರ “ಸಂವಿಧಾನ ಉಳಿಸೋ, ಪ್ರಜಾತಂತ್ರ ಉಳಿಸೋ” ಕಾರ್ಯಕ್ರಮ ಮಾಡುತ್ತಿದ್ದೇವೆ ಇವೆರಡರ ಮೇಲೆ ದಾಳಿ ನಡೀತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ, ಒಬ್ಬರು ಒಂದೇ ಮತ ಹಾಕಬೇಕು, ಇದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿ ಕೂಡ ಮತ ಹಾಕುವ ಹಕ್ಕಿದೆ. ಕಾಂಗ್ರೆಸ್ ಪಕ್ಷ ಇಂದು ಸಂವಿಧಾನದ ರಕ್ಷಣೆ ಮಾಡುವ ನೆಪದಲ್ಲಿ ಮತಗಳ್ಳತನ ತಡೆಯಲು ಮುಂದಾಗಿದ್ದೇವೆ. ಭಾರತದ ಎಲ್ಲಾ ಕಡೆ ವೋಟ್ ಚೋರಿ ಅಭಿಯಾನ ಮಾಡುತ್ತಿದ್ದೇವೆ ನಾವು ಚುನಾವಣೆ ಆಯೋಗದ ಕಣ್ಣು ತೆರೆಸಬೇಕಾಗಿದೆ. ಮಹದೇವಪುರದಲ್ಲಿ, ಆಳಂದದಲ್ಲಿ ಏನಾಗಿದೆ? ಅಲ್ಲಿ ನಡೆದದಿರುವ ಮತಕಳ್ಳತನ ಎಲ್ಲಿಯೂ ಆಗಬಾರದು ಎಂದಿದ್ದಾರೆ.
ಸಂವಿಧಾನದ ರಕ್ಷಣೆ ಗಾಗಿ ಮತಗಳ್ಳತನ ಅಭಿಯಾನ ಮಾಡುತ್ತಿದ್ದೇವೆ ಮತ ಹಾಕುವುದು ಪ್ರತಿಯೊಬ್ಬರ ಅಧಿಕಾರ. ಇದರಲ್ಲಿ ಮೋಸ ಆಗಬಾರದು, ಅದನ್ನೇ ರಾಹುಲ್, ಖರ್ಗೆ ಅವರು ಹೇಳುತ್ತಿದ್ದಾರೆ. ದೇಶದಲ್ಲಿ ಬದಲಾವಣೆ ಆಗಬೇಕಿದ್ದು, ಅದನ್ನೆ ಕಾಂಗ್ರೆಸ್ ಮಾಡುತ್ತಿದ್ದೆ ಇಂತಹ ಲಕ್ಷಾಂತರ ಅಭಿಯಾನ, ಕಾರ್ಯಕ್ರಮ ಜರುಗಬೇಕಾಗಿದೆ, ಹೊಸ ಭರವಸೆ, ಕ್ರಾಂತಿ ಮೂಡಿಸಬೇಕಿದೆ ಎಂದು ತಿಳಿಸಿದ್ದಾರೆ.
ಇನ್ನೂ, ಸಿಎಂ ಬದಲಾವಣೆ ಬಗ್ಗೆ ಶಾಸಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಪಕ್ಷದಲ್ಲಿ ಆ ರೀತಿಯಾದ ಯಾವುದೇ ಚರ್ಚೆ ಇಲ್ಲ. ಈಗಾಗಲೇ, ಪಕ್ಷದ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ, ಯಾರೂ ಪಕ್ಷದ ಚೌಕಟ್ಟು ಮೀರಬಾರದು ಎಂದು ಸೂಚನೆ ಕೊಡಲಾಗಿದೆ. ಕೆಲವರು ತಮ್ಮ ಭಾವನೆಯನ್ನು ತಿಳಿಸುವಾಗ ಪಕ್ಷದ ಚೌಕಟ್ಟು ಮೀರಿ ಮಾತಾನಾಡಿದ್ದಾರೆ.ಇದನ್ನು ಪಕ್ಷದ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಬಗೆಹರಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.