ಬೆಂಗಳೂರು: ಡೀಸೆಲ್ ದರ (Diesel Price Hike) , ಟೋಲ್ ಹೆಚ್ಚಳ, ಆರ್ ಟಿಓ ಕಿರುಕುಳ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಇಂದು ಲಾರಿ ಮಾಲೀಕರು ಮುಷ್ಕರ (Lorry Strike) ಹೂಡಿದ್ದು ರಸ್ತೆಯಲ್ಲೇ ಲಾರಿಗಳು ನಿಂತಿವೆ. ಇದರಿಂದಾಗಿ ಹಲವು ಕ್ಷೇತ್ರಗಳಿಗೆ ತೊಂದರೆಯಾಗುತ್ತಿದೆ.
ಬೆಂಗಳೂರಿನಲ್ಲಿ (Bengaluru) ಲಾರಿ ಹಾಗೂ ಟ್ರಕ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದಿನಸಿ, ತರಕಾರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಗಾಟ ಮಾಡುವ ಲಾರಿಗಳು ಸಂಚಾರ ಸ್ಥಗಿತಗೊಳಿಸಿವೆ. ಹೆದ್ದಾರಿ ಹಾಗೂ ನಿಲ್ದಾಣಗಳಲ್ಲಿ ಲಾರಿ ನಿಲ್ಲಿಸಿ ಚಾಲಕರು ಕೂಡ ಮುಷ್ಕರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾರಿ ಮಾಲೀಕರ ಬೇಡಿಕೆಗಳೇನು?
• ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಆದೇಶ ಹಿಂಪಡೆಯಬೇಕು
• ಹೆದ್ದಾರಿ ಟೋಲ್ಗಳಲ್ಲಿನ ಹಣ ವಸೂಲಿ ತಡೆಯಬೇಕು
• ಲ್ಲಿ ಆರ್ಟಿಒ ಚೆಕ್ಪೋಸ್ಟ್ಗಳನ್ನು ತೆರವು ಮಾಡಬೇಕು
• ಎಫ್ಸಿ ಫಿಟ್ನೆಸ್ ಶುಲ್ಕ ಏರಿಕೆ ಮಾಡಿರುವುದನ್ನು ಹಿಂಪಡೆಯಬೇಕು
• ಗೂಡ್ಸ್ ವಾಹನಗಳಿಗೆ ಬೆಂಗಳೂರು ಪ್ರವೇಶ ನಿರ್ಬಂಧ ಆದೇಶ ಹಿಂದೆ ಪಡೆಯಬೇಕು
ಲಾರಿ ಮಾಲೀಕರ ಹೋರಾಟಕ್ಕೆ ಟ್ಯಾಕ್ಸಿ ಚಾಲಕರು ಬೆಂಬಲ ನೀಡಿದರೂ ಅಲ್ಲಲ್ಲಿ ಟ್ಯಾಕ್ಸಿಗಳು ಸಂಚರಿಸುತ್ತಿವೆ.