ಮಹಿಳೆಯರ ಪ್ರೀಮಿಯರ್ ಲೀಗ್ ನ ಮೂರನೇ ಆವೃತ್ತಿಯ ಮಿನಿ ಹರಾಜು ಇಂದು ನಡೆಯುತ್ತಿದೆ.
ಹರಾಜಿನಲ್ಲಿ ಒಟ್ಟು 120 ಆಟಗಾರ್ತಿಯರು ಭಾಗವಹಿಸಿದ್ದು, ಐದು ಫ್ರಾಂಚೈಸಿಗಳಲ್ಲಿ ಕೇವಲ 19 ಸ್ಲಾಟ್ ಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಪೈಕಿ ಭಾರತೀಯ ಆಟಗಾರ್ತಿಯರ 14 ಸ್ಲಾಟ್ಗಳು ಮತ್ತು ವಿದೇಶಿ ಆಟಗಾರ್ತಿಯರು ಖರೀದಿಯಾಗಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ನ ಈ ಬಿಡ್ಡಿಂಗ್ ನಲ್ಲಿ 91 ಭಾರತೀಯ ಮತ್ತು 29 ವಿದೇಶಿ ಆಟಗಾರರು ಸೇರಿದ್ದಾರೆ. ಇವರಲ್ಲಿ ಮಿತ್ರ ರಾಷ್ಟ್ರಗಳ ಮೂವರು ಆಟಗಾರರು ಸೇರಿದ್ದಾರೆ. ಇದರಲ್ಲಿ 30 ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. ಮಹಿಳೆಯರ ಪ್ರೀಮಿಯರ್ ಲೀಗ್ 2025ರ ಮಿನಿ ಹರಾಜು ಬೆಂಗಳೂರಿನಲ್ಲಿ ಮಧ್ಯಾಹ್ನ 3ಕ್ಕೆ ನಡೆಯಲಿದೆ.