ಬೆಂಗಳೂರು: ಬಾಕಿ ಅಸ್ತಿ ತೆರಿಗೆ ಪಾವತಿಸಲು ಇಂದೇ ಕಡೆಯ ದಿನವಾಗಿದ್ದು, ತೆರಿಗೆ ಕಟ್ಟದಿದ್ದವರಿಗೆ ಭಾರೀ ದಂಡ ಕಾದಿದೆ.
ಇಂದು ಬಾಕಿ ಅಸ್ತಿ ತೆರಿಗೆ ಇಂದು ಕಟ್ಟಿಲ್ಲ ಅಂದರೆ, ಡಬಲ್ ತೆರಿಗೆ ಕಟ್ಟಬೇಕು. ಮಾರ್ಚ್ 31ರ ವರೆಗೆ ಬಾಕಿ ಅಸ್ತಿ ತೆರಿಗೆ ಕಟ್ಟಲು ಬಿಬಿಎಂಪಿ ವಿನಾಯಿತಿ ನೀಡಿತ್ತು. ಆಸ್ತಿ ಬಾಕಿ ತೆರಿಗೆ ಕಟ್ಟುವವರ ಅನುಕೂಲಕ್ಕಾಗಿ ಇಂದು ರಾತ್ರಿ 11ರ ವರೆಗೆ ಕೂಡ ಬಿಬಿಎಂಪಿ ಕಂದಾಯ ಇಲಾಖೆ ಕಚೇರಿಗಳನ್ನು ತೆರೆದಿರುವುದಾಗಿ ಹೇಳಿದೆ.
ರಂಜಾನ್ ಇದ್ದರೂ ಇಂದು ಬಿಬಿಎಂಪಿ ಆಯುಕ್ತರು ಸೇರಿದಂತೆ ಸಿಬ್ಬಂದಿ ರಜೆ ಮಾಡಿಲ್ಲ. ಇಂದು ರಾತ್ರಿ 11ರ ವರೆಗೂ ತೆರಿಗೆ ಕಟ್ಟಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಒಂದು ವೇಳೆ ಇಂದು ಬಾಕಿ ಅಸ್ತಿ ತೆರಿಗೆ ಕಟ್ಟಿಲ್ಲ ಅಂದರೆ, ಏ. 1ರಿಂದ ಡಬಲ್ ತೆರಿಗೆ ಕಟ್ಟಬೇಕಾಗುತ್ತದೆ. ಡಬಲ್ ತೆರಿಗೆಯೊಂದಿಗೆ ಶೇ. 9ರಷ್ಟು ಬಡ್ಡಿ ಸಹ ಪಾವತಿಸಬೇಕಾಗುತ್ತದೆ. ಈ ಕುರಿತು ಬಿಬಿಎಂಪಿ 2020ರ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ.
ಸಾರ್ವಜನಿಕರು ತೆರಿಗೆ ಕಟ್ಟಲು ಆಸಕ್ತಿ ತೋರುತ್ತಿದ್ದು, ಇಲ್ಲಿಯವರೆಗೆ ಪಾಲಿಕೆಗೆ 400 ಕೋಟಿ ರೂ. ತೆರಿಗೆ ಬಾಕಿ ಇದೆ. ಈ ಯೋಜನೆ ಸರ್ಕಾರಿ ಕಚೇರಿಗಳಿಗೂ ಅನ್ವಯವಾಗಲಿದೆ. ಬಾಕಿ ತೆರಿಗೆ ಕಟ್ಟಿಲ್ಲ ಅಂದರೆ, ಮುಂದಿನ ದಿನಗಳಲ್ಲಿ ಆಸ್ತಿ ಹರಾಜು ಹಾಕಲು ಪಾಲಿಕೆ ನಿರ್ಧರಿಸಿದೆ.