ಬೆಂಗಳೂರು: ಇಂದು ಬಿಬಿಎಂಪಿಗೆ ಸಂಕಷ್ಟದ ದಿನ ಎದುರಾದಂತಾಗಿದೆ. ಇಂದು ಬಿಬಿಎಂಪಿ 3 ಸಾವಿರ ಕೋಟಿ ಟಿಡಿಅರ್ ನೀಡಲೇಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್(supreme court) ಅದೇಶ ಉಲ್ಲಂಘನೆ ಆದಂತಾಗುತ್ತದೆ. ಹೀಗಾಗಿ ಸಂಕಷ್ಟಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಸಿಲುಕದಂತಾಗಿದೆ. ಅರಮನೆ ಮೈದಾನ ಒತ್ತುವರಿ ವಿಷಯದಲ್ಲಿ ಬಿಬಿಎಂಪಿ (BBMP)ಹಾಗೂ ಮೈಸೂರು ರಾಜಮನೆತನದ ನಡುವೆ ಜಟಾಪಟಿ ನಡೆದಿತ್ತು.
ಅರಮನೆ ರಸ್ತೆ ಅಗಲೀಕರಣಕ್ಕಾಗಿ ಬಿಬಿಎಂಪಿ 15 ಎಕರೆ ಭೂಮಿಯನ್ನು ಒತ್ತುವರಿ ಮಾಡಿತ್ತು. ಇದಕ್ಕೆ ಪ್ರತಿಫಲವಾಗಿ ಪಾಲಿಕೆ 3 ಸಾವಿರ ಕೋಟಿ ಟಿಡಿಆರ್ ನೀಡಬೇಕಿತ್ತು. ಆದರೆ, ಸರ್ಕಾರ(government) ಹಾಗೂ ರಾಜಮನೆತನದ ಕಿತ್ತಟದಿಂದ ಕೋರ್ಟ್ ಮೆಟ್ಟಿಲು ಏರಲಾಗಿತ್ತು.
ಹೀಗಾಗಿ ಸುಪ್ರೀಂ ಕೋರ್ಟ್ ಡಿಸೆಂಬರ್ ನಲ್ಲಿ ವಾದ- ವಿವಾದ ಆಲಿಸಿ ತೀರ್ಪು(judgment) ನೀಡಿತ್ತು. ಜನವರಿ 22ರ ಒಳಗೆ ಅರಮನೆ ಅರಮನೆ ಮೈದಾನ ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಬೇಕೆಂದು ತೀರ್ಪು ನೀಡಿತ್ತು. ಒಟ್ಟು 3 ಸಾವಿರ ಕೋಟಿ ರೂ. ಟಿಡಿಅರ್ ರೂಪದಲ್ಲಿ ಜಾಮೀನು ಮಾಲೀಕರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಅದೇಶ ನೀಡಿತ್ತು. ಆದರೆ, ಆ ಟಿಡಿಆರ್ ನೀಡಲು ಇಂದು ಕೊನೆಯ ದಿನವಾಗಿದೆ.
ಸದ್ಯ ಬಿಬಿಎಂಪಿಯಲ್ಲಿ ಟಿಡಿಅರ್ ನೀಡುತ್ತಿಲ್ಲ. ಟಿಡಿಆರ್(TDR) ವಿಷಯದಲ್ಲಿ ಹಲವಾರು ಗೋಲ್ ಮಾಲ್ ನಡೆದಿದ್ದವು ಎಂದು ನೀಡುವುದನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಟಿಡಿಅರ್ ಸಂಬಂಧಿಸಿದಂತೆ ನಿನ್ನೆ ಪಾಲಿಕೆ ಅಯುಕ್ತರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಏನಾಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಸದ್ಯ ಅರಮನೆ ಮೈದಾನ ಮಾಲೀಕತ್ವ ಕೋರ್ಟ್ ನಲ್ಲಿ ಇತ್ಯರ್ಥ ಅಗಿಲ್ಲ. ಹೀಗಾಗಿ ಅಸ್ತಿ ಮಾಲೀಕರು ಯಾರು ಎಂಬ ಆದೇಶ ಬರುವವರೆಗೆ ಪಾಲಿಕೆಗೆ ಕಾಲಾವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.