ಅಭಿನಯ ಚಿಕ್ರವರ್ತಿ ಕಿಚ್ಚ ಸುದೀಪ್ ಹುಟ್ಟು ಹಬ್ಬವಿಂದು. ಸುದೀಪ್ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 28 ವರ್ಷಗಳು ತುಂಬಿವೆ. ಸುದೀಪ್ ಸಾಕಷ್ಟು ಕಷ್ಟದಿಂದ ಮೇಲೆ ಬಂದವರು. ಚಂದನವನದಲ್ಲಿ ದೃಢವಾಗಿ ಕಾಲೂರಿ ನಿಲ್ಲಲು ಕಿಚ್ಚ ತುಂಬಾ ಶ್ರಮ ಹಾಕಿದ್ದಾರೆ.
ರಮೇಶ್ ಅರವಿಂದ್ ಜೊತೆ ಸುದೀಪ್ ನೀಡಿದ್ದ ಸಂದರ್ಶನದಲ್ಲಿ ಈ ಕುರಿತು ಸುದೀಪ್ ಹೇಳಿದ್ದರು.. ಸುದೀಪ್ ನಟಿಸಿದ ಮೊದಲ ಸಿನಿಮಾ ತಂಗೆವ್ವ. 1997ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ, ಈ ಚಿತ್ರ ಸೋಲು ಕಂಡಿತ್ತು. ಹೀಗಾಗಿ, ಸುದೀಪ್ ಒಂದು ಬ್ರೇಕ್ ತೆಗೆದುಕೊಂಡರು. ನಂತರ ಧಾರಾವಾಹಿಗಳತ್ತ ಮುಖ ಮಾಡಿದರು. ಆ ನಂತರ ಮತ್ತೆ ‘ಪ್ರತ್ಯರ್ಥ’ ಚಿತ್ರದಲ್ಲಿ ನಟಿಸಿದ್ದರು.
ಆನಂತರ ಹುಚ್ಚ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದ ಯಶಸ್ಸಿನ ನಂತರ ಸುದೀಪ್ ಹಿಂತಿರುಗೇ ನೋಡಲೇ ಇಲ್ಲ. ಅವರು ನಟಿಸಿದ್ದ ಚಿತ್ರಗಳು ಗೆಲುವಿನ ನಗೆ ಬೀರುತ್ತ ಸಾಗಿದವು. ಕಿಚ್ಚ ಸುದೀಪ್ ಅವರು ಇಷ್ಟು ವರ್ಷ ಒಂದೇ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈಗ ಮೂರ್ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡುವುದಾಗಿ ಸ್ವತಃ ಅವರೇ ಹೇಳಿದ್ದಾರೆ.
ಈ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಕಿಚ್ಚ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಿಚ್ಚನ ಮನೆಗೆ ಹೋಗಿ ವಿಶ್ ಮಾಡಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಸುದೀಪ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇಂದು ಅವರ ಅಭಿಮಾನಿಗಳು ಹಲವಾರು ಜನಪರ ಕೆಲಸ ಮಾಡುವುದರ ಮೂಲಕ ತಮ್ಮ ನೆಚ್ಚಿನ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.