ಬೆಂಗಳೂರು: ಇಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ವಿವಿಧ ರೀತಿಯಲ್ಲಿ ಆಚರಣೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅಭಿಮಾನಿಯೊಬ್ಬರು ವಿಶೇಷವಾಗಿ ಉಚಿತ ಚಾಟ್ಸ್ ವಿತರಣೆಯನ್ನು ಆಯೋಜಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಸಮೀಪ ಸಂಜೆ 5 ಗಂಟೆಯಿಂದ ಮಸಾಲಪುರಿ ಹಾಗೂ ಪಾನಿಪುರಿಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದಿದ್ದಾರೆ.
ಅಭಿಮಾನಿಗಳ ಈ ಸೇವಾ ಕಾರ್ಯಗಳು ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಚಿಂತನೆಗೆ ಗೌರವ ಸಲ್ಲಿಸುವಂತಾಗಿದ್ದು, ಅವರ ನೆನಪಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ.
ಇದನ್ನೂ ಓದಿ : ಇಂದು ‘ಪುನೀತ’ ದಿನ : ನಗುಮೊಗದ ಒಡೆಯನ ಜೀವನವೇ ಪ್ರೇರಕ



















