ಇಂದು ವಿಶ್ವ ಎಡಗೈ ಬಳಕೆದಾರರ ದಿನಾಚರಣೆ. ನಮ್ಮಲ್ಲಿ ಎಡಗೈ ಬಳಕೆದಾರರು ಅಲ್ಲಲ್ಲಿ ಕಾಣುತ್ತಿರುತ್ತಾರೆ. ಇದು ಎಲ್ಲರನ್ನೂ ಆಕರ್ಷಿಸುತ್ತಿದೆ.
ಅವರು ನಾವು ಬಲಗೈಯಲ್ಲಿ ಮಾಡುವ ಕೆಲಸವನ್ನು ಅವರು ಅಷ್ಟೇ ಸಲೀಸಾಗಿ ಎಡಗೈನಿಂದ ಮಾಡುತ್ತಿರುತ್ತಾರೆ. ಆದರೆ, ಎಡಗೈ ಬಳಕೆಗೆ ವಿಜ್ಞಾನದಲ್ಲಿಯೂ ಅಚ್ಚರಿ ವಿಷಯಗಳಿವೆ. ಆದರೆ, ಎಡಗೈ ಬಳಕೆಯನ್ನು ಹಲವರು ಅಶುಭ ಎನ್ನುತ್ತಿರುತ್ತಾರೆ.
ಎಡಗೈ ಬಳಸುವರ ಸಂಖ್ಯೆ ಅಲ್ಪವಾಗಿದ್ದರೂ ಅವರಿಗೆ ವಿಶೇಷವಾದ ದಿನ ಮೀಸಲಿಡಲಾಗಿದೆ. ಎಡಗೈ ಹೆಚ್ಚಾಗಿ ಬಳಕೆ ಮಾಡುವವರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನು ಆಚರಿಸಲಾಗುತ್ತಿದೆ. 1976 ರಲ್ಲಿ ಲೆಫ್ ತಾಂಡರ್ಸ್ ಇಂಟರ್ನ್ಯಾಷನಲ್ ಇಂಕ್‌ನ ಸಂಸ್ಥಾಪಕ ಡೀನ್ ಆರ್ ಕ್ಯಾಂಪ್ ಬೆಲ್ ಈ ದಿನವನ್ನು ಮೊದಲು ಜಾರಿಗೆ ತಂದಿದ್ದಾರೆ. ನಿಮಗೆ ಗೊತ್ತಾ? ಭಾರತದ ಹಲವು ಶ್ರೇಷ್ಠ ವ್ಯಕ್ತಿಗಳು ಕೂಡ ಎಡಗೈ ಬಳಕೆದಾರರು. ನಮ್ಮ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿ, ಹಲವು ವರ್ಷಗಳ ಕಾಲ ಕ್ರಿಕೆಟ್ ಲೋಕ ಆಳಿದ್ದ ಸಚಿನ್ ತೆಂಡೂಲ್ಕರ್, ಖ್ಯಾತ ಉದ್ಯಮಿ ಹಾಗೂ ಸಹೃದಯಿ ರತನ್ ಟಾಟಾ ಕೂಡ ಎಡಗೈ ಬಳಸುವ ಸಾಧಕರು.
ಎಡಗೈ ಬಳಕೆಯಿಂದ ಹಲವಾರು ಅನುಕೂಲಗಳಿವೆ. ಹೀಗಾಗಿ ಈ ಕೈ ಉತ್ತೇಜಿಸುವ ಹಿನ್ನೆಲೆಯಲ್ಲಿ 1990ರಲ್ಲಿ ಲೆಫ್‌ಥ್ಯಾಂಡರ್ಸ್ ಇಂಟರ್‌ನ್ಯಾಷನಲ್ ಕ್ಲಬ್ ನ್ನು ಸ್ಥಾಪಿಸಲಾಯಿತು. 1992 ರಲ್ಲಿ, “ಎಡಗೈಯವರ ಅನುಕೂಲಗಳು ಮತ್ತು ಅನಾನುಕೂಲಗಳು” ಕುರಿತು ಜಾಗೃತಿ ಮೂಡಿಸಲು ಇದೇ ಕ್ಲಬ್ ಇಂಟರ್ ನ್ಯಾಷನಲ್ ಲೆಫ್ಟ್ ಹ್ಯಾಂಡರ್ಸ್ ಡೇ ಆರಂಭಿಸಿತು. ಹೀಗಾಗಿ ಆಗಸ್ಟು 13ರಂದು ಅಂತಾರಾಷ್ಟ್ರೀಯ ಎಡಚರರ ದಿನ ಆಚರಿಸಲಾಗುತ್ತಿದೆ.
ಮಹಾತ್ಮ ಗಾಂಧಿ, ನರೇಂದ್ರ ಮೋದಿ, ಮದರ್ ತೆರೇಸಾ, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರತನ್ ಟಾಟಾ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಎಡಗೈ ಸಾಧಕಾರಿಗ್ದಾರೆ.