ನವದೆಹಲಿ: ಪಶ್ಚಿಮ ಬಂಗಾಳದ 6 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ. ಆದರೆ, ಎಲ್ಲ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ ಭರ್ಜರಿ ಜಯ ಸಾಧಿಸಿದೆ.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಿದ್ದ ಕೆಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಆದರೆ, ಆಡಳಿತ ಪಕ್ಷಕ್ಕೆ ಅಲ್ಲಿನ ಮತದಾರ ಜೈ ಎಂದಿದ್ದಾನೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಾದ್ಯಂತ ತೀವ್ರ ಪ್ರಚಾರಗಳು ನಡೆದಿದ್ದವು. ಹೀಗಾಗಿ ಈ ಚುನಾವಣೆ ಸಿಎಂ ಮಮತಾ ಬ್ಯಾನರ್ಜಿಗೆ ಅಗ್ನಿ ಪರೀಕ್ಷೆಯಾಗಿತ್ತು. ಆದರೂ ಉಪ ಚುನಾವಣೆಯಲ್ಲಿ ಮತದಾರರು ಟಿಎಂಸಿಗೆ ಜೈ ಎಂದಿದ್ದಾರೆ. ಬಿಜೆಪಿಯ ಎಲ್ಲ ತಂತ್ರಗಳು ಬಂಗಾಳದಲ್ಲಿ ಕೈ ಕೊಟ್ಟಿವೆ. ಹೀಗಾಗಿ ದಕ್ಷಿಣ ಕೊಲ್ಕತ್ತಾದಲ್ಲಿನ ಸಿಎಂ ನಿವಾಸ ಸೇರಿದಂತೆ ರಾಜ್ಯಾದ್ಯಂತ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.