ಚಂದನವನದ ಹಿರಿಯ ನಟ ಡಿಂಗ್ರಿ ನಾಗರಾಜ್ ಸುಪುತ್ರ, ನಟ ರಾಜವರ್ಧನ್ ಈಗ ನಿರ್ಮಾಪಕರಾಗಿ ಹೆಜ್ಜೆ ಇಡುತ್ತಿದ್ದಾರೆ. ನಗರದ ಜಿಟಿ ಮಾಲ್ ನಲ್ಲಿರುವ MMB Legacy ಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಸಾಲು ಸಾಲಾಗಿ ಚಿತ್ರ ಮಾಡಲು ಸಿದ್ಧರಾಗಿದ್ದು , “ಜಾವಾ” ಎಂಬ ಚಿತ್ರದ ಟೈಟಲ್ ರಿವೀಲ್ ಮಾಡಲಾಯಿತು.
ಈ ಚಿತ್ರವನ್ನು ಪತ್ರಕರ್ತ ಹಾಗೂ ಬರಹಗಾರ ದೇವಾ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದು, ಮ್ಯಾಸಿವ್ ಹೀರೋ ರಾಜವರ್ಧನ್ ನಾಯಕನಾಗಿ ಅಭಿಸುತ್ತಿದ್ದು , ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರದ ನಟ ಹಾಗೂ ನಿರ್ಮಾಪಕ ರಾಜವರ್ಧನ್ ಮಾತನಾಡಿ, ನಮ್ಮ ತಂದೆ ಡಿಂಗ್ರಿ ನಾಗರಾಜ್ 40 ವರ್ಷಗಳಿಂದ ಚಿತ್ರಗಳಲ್ಲಿ ನಟಿಸಿ , ಸೀರಿಯಲ್ , ಸಿನಿಮಾಗಳನ್ನ ನಿರ್ಮಿಸಿ , ನಿರ್ದೇಶಿಸಿ ಪ್ರೇಕ್ಷಕರನ್ನ ರಂಜಿಸುತ್ತ ಮನ ಗೆದ್ದಿದ್ದಾರೆ. ನಾನು ಕೂಡ ಚಿತ್ರರಂಗದಲ್ಲಿ ನಟನಾಗಿ ಬಿಚ್ಚುಗತ್ತಿ , ಪ್ರಣಯಂ, ಹಿರಣ್ಯ, ಗಜರಾಮ ಸೇರಿದಂತೆ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಸಾಗಿದ್ದೇನೆ. ನನ್ನದೇ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಜಾವಾ ಎಂಬ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದೇನೆ ಎಂದಿದ್ದಾರೆ.
ನಾಯಕಿಯಾಗಿ ಅಭಿನಯಿಸುತ್ತಿರುವ ರಾಗಿಣಿ ದ್ವಿವೇದಿ ಮಾತನಾಡಿ, ನಿರ್ದೇಶಕರು ಬಹಳಷ್ಟು ಸಿದ್ಧತೆ ಮಾಡಿಕೊಂಡು ಬಂದು ನನಗೆ ಮೊದಲು ಒಂದು ಕಥೆ ಹೇಳಿದರು. ತದನಂತರ ಈ ಕಥೆಯನ್ನ ಹೇಳಿದ ರೀತಿ ಇಷ್ಟವಾಯಿತು. ಬಹಳ ಚಾಲೆಂಜಿಂಗ್ ಇರುವಂತಹ ಪಾತ್ರ ನನ್ನದಾಗಿದೆ. ಸಿನಿಮಾ ನಟಿಯ ಬದುಕಿನ ಸುತ್ತ ಸಾಗುವ ಕಥೆ ಇದಾಗಿದೆ ಎಂದಿದ್ದಾರೆ.