ಮಂಡ್ಯ, ಜ.05: ಕನ್ನಡದ ಜನಪ್ರಿಯ ಸಿನಿಮಾ ʼತಿಥಿ’ ನಟನೆಯ ಖ್ಯಾತಿಯ ಹಿರಿಯ ನಟ ‘ಸೆಂಚುರಿ ಗೌಡ’ ನಿಧನರಾಗಿದ್ದಾರೆ. ಅವರು ನಿನ್ನೆ ರಾತ್ರಿ ಸಿಂಗರೇಗೌಡನ ಕೊಪ್ಪಲು ಗ್ರಾಮದಲ್ಲಿ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗೇಗೌಡನ ಕೊಪ್ಪಲಿನ ನಿವಾಸಿ ಆಗಿದ್ದ ಸಿಂಗಾರಿ ಗೌಡ ವಯೋಸಹಜ ಕಾಖಾಯಿಲೆಯಿಂದ ಬಳಲುತ್ತಿದ್ದರು.
ಇಂದು ಸಿಂಗೇಗೌಡನ ಕೊಪ್ಪಲಿನಲ್ಲಿ ಸೆಂಚುರಿ ಗೌಡರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿದೆ. ತಿಥಿ ಸಿನಿಮಾದ ಮೂಲಕ ಸಿಂಗಾರಿ ಗೌಡ ಅಲಿಯಾಸ್ ಸೆಂಚುರಿ ಗೌಡ ಜನಪ್ರಿಯರಾಗಿದ್ದರು. ʼತಿಥಿ’ ಸಿನಿಮಾದಿಂದ ಜನಪ್ರಿಯತೆ ಗಳಿಸಿದ ‘ಸೆಂಚುರಿ ಗೌಡ’ರ ನಿಜವಾದ ಹೆಸರು ಸಿಂಗಾರಿ ಗೌಡ ಅಥವಾ ಸಿಂಗ್ರಿ ಗೌಡ. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿ ಗೌಡ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದ್ದರು.
ಇತ್ತೀಚೆಗೆ ‘ಗಡ್ಡಪ್ಪ’ ಖ್ಯಾತಿಯ ನಟ ಚನ್ನೇಗೌಡ ನಿಧನರಾಗಿದ್ದರು. ಇವರಿಬ್ಬರೂ ‘ತಿಥಿ’ ಚಿತ್ರದಲ್ಲಿ ಸಹಜ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದರು. ಸಹಜ ನಟನೆಯಿಂದ ‘ತಿಥಿ’ ಸಿನಿಮಾ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿತ್ತು. ಇವರು `ಹಾಲು ತುಪ್ಪ’, `ಚಿನ್ನದ ಗೊಂಬೆ’, ‘ಹಳ್ಳಿ ಪಂಚಾಯಿತಿ’ `ತರ್ಲೆ ವಿಲೇಜ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ಎಸೆತ ಪ್ರಕರಣ | ಮೂವರು ಅಪ್ರಾಪ್ತರು ವಶ



















