ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಕಾರ್ಯನಿರ್ವಹಣೆಯ ಬಗ್ಗೆ ಬಿಜೆಪಿ ಹೈಕಮಾಂಡ್‌ಗೂ ಒಳ್ಳೆಯ ಅಭಿಪ್ರಾಯವಿದೆ. ಆರ್. ಅಶೋಕ್ ರಾಜ್ಯ ಬಿಜೆಪಿಯಲ್ಲಿ ಪ್ರಭಾವಿ ನಾಯಕರೂ ಹೌದು. ಆದರೇ, ಆರ್.ಅಶೋಕ್ ವಿಪಕ್ಷ ನಾಯಕರಾಗಿ ಒಂದುವರೆ ವರ್ಷ ಕಳೆದರೂ ಈವರೆಗೂ ಅವರಿಗೆ ಸರ್ಕಾರಿ ನಿವಾಸ ದೊರಕಲಿಲ್ಲ ಎನ್ನುವ ಮಾಹಿತಿಯನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಕರ್ನಾಟಕ ನ್ಯೂಸ್ ಬೀಟ್ ರಿವೀಲ್ ಮಾಡುತ್ತಿದೆ.
ಆರ್.ಅಶೋಕ್‌ಗೆ ವಿಪಕ್ಷ ನಾಯಕನಾದ್ರೂ ನಿವಾಸವೇಕೆ ಸಿಕ್ಕಿಲ್ಲ ? :
ಕಳೆದ ಒಂದುವರೆ ವರ್ಷಗಳ ಹಿಂದೆ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದರೂ ಈವರೆಗೆ ಅವರಿಗೆ ಸರ್ಕಾರಿ ನಿವಾಸ ನೀಡದೇ ಸತಾಯಿಸುತ್ತಿದೆ ಎಂಬ ಆರೋಪ ಈಗ ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ. ಒಬ್ಬ ವಿಪಕ್ಷ ನಾಯಕನಿಗೆ ಸೌಲಭ್ಯ ಕೊಡಬೇಕಿದ್ದ ಸರ್ಕಾರ ಇಲ್ಲಿಯವರೆಗೂ ನೀಡದೇ ಇರುವುದು ವೈಷಮ್ಯದ ರಾಜಕಾರಣದ ಪರಮಾವಧಿ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆಯಾಗುತ್ತಿದೆ. ಹಾಗಾದರೇ ಸರ್ಕಾರಿ ನಿವಾಸ ನೀಡದೇ ಇರುವುದಕ್ಕೆ ಕಾರಣವೇನು ? ಇದರ ಹಿಂದೆ ಖಂಡಿತ ಬಲವಾದ ಕಾರಣವಿದೆ ಎನ್ನುವುದರಲ್ಲಿ ನೋ ಡೌಟ್.
ಸಿದ್ದರಾಮಯ್ಯರಿಗೂ ಸಿಕ್ಕಿರಲಿಲ್ಲ ಸರ್ಕಾರಿ ನಿವಾಸ !
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಿಧಾನಸಭಾ ವಿಪಕ್ಷ ನಾಯಕರಾಗಿ ಹಾಲಿ ಸಿಎಂ ಸಿದ್ಧರಾಮಯ್ಯ ಇದ್ದರು. ಅಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿರಲಿಲ್ಲ. ಅದಕ್ಕೆ ಪ್ರತಿಕಾರವಾಗಿ ಕಾಂಗ್ರೆಸ್ ಆರ್. ಅಶೋಕ್ ಅವರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡುತ್ತಿಲ್ಲವೇ ? ಎಂಬ ಪ್ರಶ್ನೆ ಈಗ ಮೇಲೆದ್ದಿದೆ. ಹೌದು, ಅಂದು ಸಿದ್ದರಾಮಯ್ಯ ಅವರು ಸರ್ಕಾರಿ ನಿವಾಸಕ್ಕಾಗಿ ಅಂದಿನ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದರೂ ಡೊಂಟ್ ಕೇರ್ ಮನೋಭಾವ ತೋರಿಸಿತ್ತು. ಅದಕ್ಕೆ ಸೇಡು ತೀರಿಸಿಕೊಳ್ಳುವಂತೆ ಇಂದಿನ ಸರ್ಕಾರ ಮಾಡಿದಂತಿದೆ.
ಅಂದಿನ ಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರದ ಮಾತು ಕೇಳಿ ನನ್ನನ್ನು ಕೇವಲವಾಗಿ ನಡೆಸಿಕೊಂಡಿದ್ದರು ಎನ್ನುವ ಅಭಿಪ್ರಾಯ ಸಿದ್ದರಾಮಯ್ಯ ಅವರದ್ದಾಗಿರಬಹುದು. ಇಂದು ಬಿಜೆಪಿಯವರು ಅಧಿಕಾರ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಅವರು ಅಂದು ಅಧಿಕಾರದಲ್ಲಿದ್ದಾಗ ನಡೆದುಕೊಂಡ ಮಾದರಿಯಲ್ಲಿ ನಾವು ಕೂಡ ನಡೆದುಕೊಳ್ಳಬೇಕು. “ಟಿಟ್ ಫಾರ್ ಟ್ಯಾಟ್” ಎಂಬುದನ್ನು ತೋರಿಸೋಣ ಎಂದು ಸುಮ್ಮನಾಗಿರುವಂತೆ ರಾಜ್ಯ ಸರ್ಕಾರ ಪ್ರತಿಕಾರವನ್ನು ಈಗ ಆರ್. ಅಶೋಕ್ ವಿರುದ್ಧ ತೀರಿಸಿಕೊಂಡಂತಿದೆ.
ಒಟ್ಟಿನಲ್ಲಿ, ಬಿಜೆಪಿ ಅಂದು ಸಿದ್ದರಾಮಯ್ಯಗೆ ಸರ್ಕಾರಿ ನಿವೇಶನ ನೀಡದೆ ಇರುವುದು ಮತ್ತು ಇಂದು ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೂ ವಿಧಾನಸಭೆಯ ವಿಪಕ್ಷ ನಾಯಕರಾಗಿಲಿ, ವಿಧಾನಪರಿಷತ್‌ನ ವಿಪಕ್ಷ ನಾಯಕರಾಗಲಿ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡದೇ ಸುಮ್ಮನಾಗಿರುವುದು ಪ್ರತಿಕಾರ ರಾಜಕಾರಣಕ್ಕೆ ಪುಷ್ಠಿ ನೀಡಿದಂತಾಗಿದೆ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಚರ್ಚಿತ ವಿಷಯವಾಗಿದೆ.


















