ಶಾಸಕ ಯತ್ನಾಳ್ ಅವರ ಆಸೆಗಳಿಗೆ ಹಾಗೂ ಅನುಮಾನಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಲಾಂಗ್ ಟರ್ಮ್ ಸ್ಟ್ರಾಟರ್ಜಿ ಇದ್ದಂತಿದೆ. ಅವರಿಗೆ ಹೋರಾಟ ಮಾಡಬೇಡಿ ಎಂದು ಹೇಲಿಲ್ಲ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ ಎಂದಿದ್ದಾರೆ.
ಯಾವುದೇ ಅಭಿವೃದ್ಧಿ ಇಲ್ಲದೆ ರಾಜ್ಯದ ಜನತೆ ತತ್ತರಿಸುವಂತಾಗಿದೆ. ಅವರ ಧ್ವನಿಯಾಗಿ ನಾಳೆಯಿಂದ ಅಧಿವೇಶನದಲ್ಲಿ ಎಚ್ಚರಿಸುವ ಕೆಲಸ ಮಾಡಲಿದ್ದೇವೆ. ಬೆಳಗಾವಿಯ ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಹೊರಗೆಳೆಯುವ ಕೆಲಸ ಮಾಡುತ್ತೇವೆ. ಅಭಿವೃದ್ಧಿಗಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.