ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಪ್ರತಿವರ್ಷದಂತೆ ಈ ವರ್ಷದ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಅ.30 ರಂದು ನಡೆದ ಕಾರ್ಯಕಾರ್ಯಿಣಿ ಸಭೆಯಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಆ ಪ್ರಕಾರ ಚುನಾವಣೆಯನ್ನ ಮುಂಬರುವ ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಧ್ಯಕ್ಷಸ್ಥಾನ, ಉಪಾಧ್ಯಕ್ಷ ಸ್ಥಾನ, ವಿತರಕ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಬಾರಿ ನಿರ್ಮಾಪಕ ಸಂಘದಿಂದ ಅಧ್ಯಕ್ಷರಾಗಲು ಅವಕಾಶವಿರುವ ಕಾರಣ ಸಾರಾ ಗೋವಿಂದು ಸೇರಿದಂತೆ ಹಲವರು ಸ್ಪರ್ಧೆಗಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಫಿಲ್ಮ್ ಚೇಂಬರ್ ಚುನಾವಣೆ ಡಿ.14ರಂದು ನಡೆದಿತ್ತು. ಪ್ರದರ್ಶಕ ವಲಯದಿಂದ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ ಆಗಿದ್ದರು. ಈ ವರ್ಷ ಡಿಸೆಂಬರ್ 20ರಂದು ಚುನಾವಣೆಗೆ ದಿನಾಂಕ ನಿಗಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ : ಪರೀಕ್ಷೆ ಮುಗಿದು 5 ತಿಂಗಳಾದ್ರೂ ಫಲಿತಾಂಶವಿಲ್ಲ : ಗುಲ್ಬರ್ಗ ವಿವಿ ವಿರುದ್ದ B.Ed ವಿದ್ಯಾರ್ಥಿಗಳ ಆಕ್ರೋಶ



















