ಬೆಂಗಳೂರು: ಆರ್ಸಿಬಿ ತಂಡದ ಆಟಗಾರರು ಅಭಿಮಾನಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಇಷ್ಟ ಆಗ್ತಾನೆ ಇರ್ತಾರೆ, ಅದೇ ರೀತಿ ಅರ್ ಸಿ ಬಿಯ ಸ್ಟಾರ್ ಫಿನಿಶರ್ ಡೀಮ್ ಡೇವಿಡ್ ಚಿನ್ನಸ್ವಾಮಿ ಸ್ಟೇಡಿಯಂನ ಸ್ವಿಮಿಂಗ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಇಷ್ಟ ಆಗಿದ್ದಾರೆ.
ಪ್ರಾಕ್ಟೀಸ್ ವೇಳೆ ಬಂದ ವೇಳೆ ಗ್ರೌಂಡ್ ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಆಟ ಆಡಿ ಎಂಜಾಯ್ ಮಾಡಿದ್ದಾರೆ. ಅತ್ತ ಮಳೆಗೆ ಪ್ರಾಕ್ಟೀಸ್ ಮಾಡಲಾಗದೆ ಆಟಗಾರರು ಬೇಜಾರ್ ಆಗಿದ್ರೆ, ಇತ್ತಾ ಮಳೆ ಬೀಳುವ ಸಮಯವನ್ನು ಟಿಮ್ ಡೇವಿಡ್ ಸಖತ್ ಆಗಿ ಎಂಜಯ್ ಮಾಡಿದ್ದಾರೆ. ಟಿಮ್ಡೇವಿಡ್ ಜೋಶ್ಗೆ ಸಹ ಆಟಗಾರರು ಚಪ್ಪಾಳೆತಟ್ಟಿ ಹುರಿದುಂಬಿಸಿದ್ದಾರೆ. ಇನ್ನು ನಾಳೆಯಿಂದ ಮತ್ತೆ ಐಪಿಎಲ್ ಪುನರಾರಂಭವಾಗಲಿದ್ದು, ಅರ್ ಸಿಬಿ ಕೆಕೆಅರ್ ನಡುವೆ ಮೊದಲ ಮ್ಯಾಚ್ ನಡೆಯಲಿದೆ.