ಮೈಸೂರು: ಕಬಿನಿ ಕಾಡು ವ್ಯಾಪ್ತಿಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ಅಪರೂಪದ ಹುಲಿ ಮರಿಗಳ ಮನಮೋಹಕ ದೃಶ್ಯ ಸೆರೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಂಪಾಗಿರುವ ಕಾಡಿನಲ್ಲಿ, ಮಣ್ಣಿನ ವಾಸನೆ ಸವಿದು ಮೈಮರೆತ ಪುಟ್ಟ ಹುಲಿ ಮರಿಗಳು ಆಟವಾಡುತ್ತಾ ಕಾಣಿಸಿಕೊಂಡಿವೆ. ತಾಯಿಯೊಂದಿಗೆ ಸಫಾರಿ ಮಾರ್ಗದ ರಸ್ತೆಗೆ ಇಳಿದ ಮರಿಗಳು ಮಣ್ಣಿನ ಗಮಲಿಗೆ ಮಾರುಹೋಗಿ ತುಂಟಾಟದಲ್ಲಿ ತೊಡಗಿದ್ದವು.
ಸಫಾರಿ ವೇಳೆ ಪ್ರವಾಸಿಗರ ಕ್ಯಾಮೆರಾದಲ್ಲಿ ಈ ಅಪರೂಪದ ಕ್ಷಣಗಳು ಸೆರೆಯಾಗಿದ್ದು, ತಾಯಿ ಹುಲಿ ಮರಿಗಳೊಂದಿಗೆ ರಾಜಗಾಂಭೀರ್ಯದಿಂದ ರಸ್ತೆ ಮಧ್ಯದಲ್ಲೇ ಕುಳಿತಿದ್ದ ದೃಶ್ಯವೂ ಗಮನ ಸೆಳೆದಿದೆ.
ಈ ಮನಮೋಹಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕಬಿನಿಯ ಸೊಬಗನ್ನು ಕಣ್ತುಂಬಿಕೊಂಡ ವನ್ಯಜೀವಿ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಂದು ರಾಜ್ಯದ ಹಲವೆಡೆ ಗುಡುಗು-ಸಿಡಿಲು ಸಹಿತ ಮಳೆ : 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್



















