ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಗ್ಗೆ ಹಲವು ಇಂಜಿನಿಯರ್ ಮನೆಗಳ ಮೇಲೆ ದಾಳಿ ನಡೆಸಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ದಾಳಿ(Lokayukta Raid) ನಡೆದಿದ್ದವು.
ಅಲ್ಲದೇ, ಬೆಳಿಗ್ಗೆಯಿಂದಲೂ ಹಲವು ಅಧಿಕಾರಿಗಳ ಮನೆಯಲ್ಲಿ ಸಿಕ್ಕಿರುವ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈಗಲೂ ಹಲವೆಡೆ ದಾಖಲೆ ಪರಿಶೀಲನೆ ನಡೆಯುತ್ತಿವೆ. ಈ ಮಧ್ಯೆ ಬಿಬಿಎಂಪಿ (BBMP) ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ನಿವಾಸದ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಒಂದು ಕ್ಷಣ ಶಾಕ್ ಆಗಿದೆ. ನಗರದ ಕುಮಾರ ಪಾರ್ಕ್ ನಲ್ಲಿನ ಮೋತಿ ಅಪಾರ್ಟ್‌ಮೆಂಟ್ ನ ಫ್ಲ್ಯಾಟ್ ನಲ್ಲಿ ಚಿನ್ನಾಭರಣಗಳ ಜೊತೆಗೆ 5 ತಲವಾರ್, 3 ಚಾಕು ಮತ್ತು 2 ಹುಲಿ ಉಗುರು ಪತ್ತೆಯಾಗಿವೆ.
ದುಬಾರಿ ಮೌಲ್ಯದ 7 ಲೈಟರ್ ಗಳು ಕೂಡ ಪತ್ತೆಯಾಗಿವೆ. 2 ಹುಲಿ ಉಗುರು ಜಪ್ತಿ ಮಾಡಿರುವ ಅರಣ್ಯಾಧಿಕಾರಿಗಳು ಕೊಂಡೊಯ್ದಿದ್ದಾರೆ. ಎರಡು ಹುಲಿ ಉಗುರು ಪತ್ತೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾದೆ. ಹುಲಿ ಉಗುರಿನ ನೈಜತೆ ಪರೀಕ್ಷೆಗೆ ಮಲ್ಲೇಶ್ವರಂನ ಅರಣ್ಯ ಭವನಕ್ಕೆ ತೆಗೆದುಕೊಂಡು ಹೋದಿದ್ದಾರೆ. ಪರಿಕ್ಷೆ ವೇಳೆ ಅಸಲಿ ಹುಲಿ ಉಗುರು ಎಂಬುದು ಸಾಬೀತಾದರೆ ಬಸವರಾಜ್ ಮಾಗಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ನಕಲಿ ದಾಖಲಾತಿ ಸೃಷ್ಟಿಸಿದ ಕೇಸ್ ನಲ್ಲಿ ಜೈಲುಪಾಲಾಗಿದ್ದ ಮಾಗಿ ಇತ್ತೀಚೆಗಷ್ಟೇ ಆಚೆ ಬಂದಿದ್ದ. ಇಂದು ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನಲ್ಲಿ 5 ಕಡೆ, ಕಲಬುರಗಿಯಲ್ಲಿ 4 ಕಡೆ ಸೇರಿದಂತೆ ಬಸವರಾಜ ಮಾಗಿಗೆ ಸೇರಿದ್ದ ಒಟ್ಟು 9 ಕಡೆ ದಾಳಿ ನಡೆಸಿದ್ದಾರೆ. ನಕಲಿ ದಾಖಲಾತಿ ಸೃಷ್ಟಿ ಆರೋಪದಲ್ಲಿ ಹಿಂದೆ ಬಿಬಿಎಂಪಿಯಿಂದ ಅಮಾನತು ಮಾಡಲಾಗಿತ್ತು. ತಾಯಿ ಹೆಸರಿನಲ್ಲಿ ಸುಮಾರು 50 ಎಕರೆಯ ಕೋಟಿ ಕೋಟಿ ಬೆಲೆ ಬಾಳುವ ಜಮೀನು ಖರೀದಿ ಮಾಡಿದ್ದರು. ಕಲಬುರಗಿಯಲ್ಲಿ ಕೋಟಿ ಮೌಲ್ಯದ 4 ಅಂತಸ್ತಿನ ಮನೆ ಅಲ್ಲದೇ ಹಲವು ಕಡೆ ಸಾಕಷ್ಟು ಆಸ್ತಿ ಹೊಂದಿದ್ದರು. ಸದ್ಯ ಲೋಕಾಯುಕ್ತರು ಈ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ.
