ಹುಬ್ಬಳ್ಳಿ: ಚಲಿಸುತ್ತಿದ್ದ ಟ್ರೈನ್‌ನಲ್ಲಿ ಯುವಕರಿಬ್ಬರು ಗಾಂಜಾ ಸೇವನೆ ಮಾಡುತ್ತಿರುವ ಘಟನೆ ಹುಬ್ಬಳ್ಳಿಯ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ ರೈಲಿನಲ್ಲಿ ಕಂಡು ಬಂದಿದೆ.
ಸಾರ್ವಜನಿಕರ ಭಯವಿಲ್ಲದೇ ರಾಜಾರೋಷವಾಗಿ ಯುವಕರಿಬ್ಬರು ಸಿಗರೇಟ್‌ನಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಟ್ರೈನ್ ನಂಬರ 12650 ಈ ರೈಲಿನಲ್ಲಿ ರಾತ್ರಿಹೊತ್ತು ಪ್ರಯಾಣಿಸುವಾಗ ಈ ಘಟನೆ ನಡೆದಿದ್ದು, ಅದೇ ಟ್ರೈನ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಸಾರ್ವಜನಿಕರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಯುವಕರು ಯಾರು ಎಂಬುದನ್ನು ಪತ್ತೆಹಚ್ಚಿ, ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 10 ಗಂಟೆಗಳ ಕಾಲ ಪೋಷಕರ ‘ಡಿಜಿಟಲ್ ಅರೆಸ್ಟ್’.. 8ನೇ ತರಗತಿ ಬಾಲಕನ ಜಾಣ್ಮೆಯಿಂದ ತಪ್ಪಿದ ಭಾರೀ ವಂಚನೆ!



















