ಹಾಸನ : ಹಾಸನದಲ್ಲಿ ಪುಂಡರ ಹಾವಳಿ ದಿನೆ ದಿನೇ ಹೆಚ್ಚಾಗುತ್ತಿದೆ. ಸಿನಿಮಾ ಸ್ಟೈಲ್ ನಲ್ಲಿ ಬಸ್ ಅಡ್ಡಗಟ್ಟಿ, ನುಗ್ಗಿ ಕಾಲೇಜು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಂತೇಮರೂರು ಬಳಿ ನಡೆದಿದೆ.
ಹುಡುಗಿ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಅರಕಲಗೂಡು ತಾ. ಜೋಡಿಗುಬ್ಬಿ ಕಾಲೇಜು ವಿದ್ಯಾರ್ಥಿಗಳಿಗೆ ಸಂತೆ ಮರೂರಿನಲ್ಲಿ ಕಾದು ನಿಂತಿದ್ದ ಸ್ಥಳೀಯ ಯುವಕರು ಅಟ್ಯಾಕ್ ಮಾಡಿದ್ದಾರೆ. ರೌಡಿಗಳಂತೆ ವರ್ತಿಸಿ ಬಸ್ ನಿಂದ ವಿದ್ಯಾರ್ಥಿಗಳ ಕೆಳಗೆ ಎಳೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಇದನ್ನೂ ನೋಡುತ್ತಾ ಉಳಿದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ.
ವಿದ್ಯಾರ್ಥಿಗಳ ಶರ್ಟ್ ಬಿಚ್ಚಿಸಿ, ಅವ್ಯಾಚ್ಯ ಪದಗಳಿಂದ ಬೈದು ಹಲ್ಲೆಗೈದಿದ್ದಾರೆ. ಹೊಡೆತದಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಅತ್ತಿತ್ತ ಓಡಾಡಿದ್ದಾರೆ. ಇದನ್ನೂ ಸ್ಥಳೀಯರೊಬ್ಬರು ವಿಡಿಯೋ ಸೆರೆ ಹಿಡಿದು ಸಾಮಾಜಿಕಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದಾರೆ.
ಇದನ್ನೂ ಓದಿ : ಹೆಣ್ಣು ಶಿಶು ಹುಟ್ಟಿತು ಎಂಬ ಒಂದೇ ಕಾರಣಕ್ಕೆ.. ದೇವಸ್ಥಾನದ ಆವರಣದಲ್ಲಿ ಬಿಟ್ಟು ಹೋದ ಪಾಪಿಗಳು



















