ಚಿತ್ರದುರ್ಗ : ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ 5ನೇ ಕ್ರಾಸ್‌ನಲ್ಲಿ ನಡುರಾತ್ರಿ ಮನೆ ನುಗ್ಗಿದ ಪುಂಡರು ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದು ಅಟ್ಟಾಹಾಸ ಮೆರೆದಿದ್ದಾರೆ.
ಈ ಮಾರಾಣಾಂತಿಕ ಹಲ್ಲೆಯು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಗಾಂಧಿನಗರ ನಿವಾಸಿ ಯಶವಂತ ಎಂಬವನ ಮೇಲೆ ಹಲ್ಲೆಯಾಗಿರುವುದು ಎನ್ನಲಾಗಿದೆ.
ಆಟೋ, ಬೈಕ್‌ನಲ್ಲಿ 8ಕ್ಕೂ ಹೆಚ್ಚು ದುಷ್ಕರ್ಮಿಗಳು ಬಂದು ಈ ಕೃತ್ಯವೆಸಗಿದ್ದಾರೆ. ಹಳೆಯ ವೈಶಮ್ಯ ಹಿನ್ನೆಲೆ, ಕ್ಷುಲ್ಲಕ ಕಾರಣಕ್ಕೆ ಗುಂಪು ಕಟ್ಟಿಕೊಂಡು ಹಿಗ್ಗಮುಗ್ಗ ಹೊಡೆದಿದ್ದಾರೆ.
ಕೃಷ್ಣ, ತರುಣ್ ಅಲಿಯಾಸ್ ತುಂಟ, ರಾಮ್ ಅಲಿಯಾಸ್ ಕಲ್ಕಿ, ರೇಣುಕಾ, ದಯಾ, ಬಾಲರಾಜ್ ಎಂಬವರು ಹಲ್ಲೆ ಎಸಗಿದ ಆರೋಪಿಗಳಾಗಿದ್ದಾರೆ. ಗಾಯಾಳು ಯಶವಂತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆರೋಪಿತರ ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ IPC 352, 151/2, 118/1, 109, 351/2, 190 BNS ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ : ಮಂಡ್ಯ | KSRTC ಬಸ್‌ನಲ್ಲಿ ಮಗುವಿಗೆ ಜನ್ಮ ಕೊಟ್ಟ ಮಹಿಳೆ



















