ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್, ಫೋನ್ ಟ್ಯಾಪಿಂಗ್ ಹಾಗೂ ಸಂವಿಧಾನ ಬದಲಾವಣೆ ವಿಚಾರಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ.
ಮೂರು ಪ್ರಕರಣಗಳನ್ನು ವಿಪಕ್ಷಗಳು ಗಂಭೀರವಾಗಿ ಪರಿಗಣಿಸಿದ್ದು, ಜನತಾ ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಲು ನಿರ್ಧರಿಸಿವೆ. ಈಗಾಗಲೇ ಹನಿಟ್ರ್ಯಾಪ್ ವಿಷಯ ವಿಧಾನಸೌಧದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದ ಕುರಿತು ತನಿಖೆಗೆ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಆರ್. ಅಶೋಕ್ ಅವರು, ನನ್ನ ಹಾಗೂ ಕುಮಾರಸ್ವಾಮಿ ಫೋನ್ ಟ್ಯಾಪಿಂಗ್ ನಡೆದಿದೆ. ಇದು ಹಲವು ದಿನಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಇದರ ಮಧ್ಯೆ ಸಂವಿಧಾನ ಬದಲಾವಣೆಯ ವಿಚಾರ ಮುನ್ನೆಲೆಗೆ ಬಂದಿದ್ದು, ಜನರ ಮುಂದೆ ಇವುಗಳನ್ನು ಇಟ್ಟು ಹೋರಾಟ ಮಾಡಲು ಈಗ ವಿಪಕ್ಷಗಳು ಮುಂದಾಗಿವೆ.