ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ನೋಂದಣಿ ಮಾಡಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕರಾಯಿ, ಮುರಳೀಧರ್, ಮಂಜುನಾಥ್ ಬಂಧಿತ ಆರೋಪಿಗಳು.

ಲಕ್ಷಿ ದೇವಮ್ಮ ಅವರ ಪತಿ ಬೈರಪ್ಪಗೆ ಬಿಡಿಎ ಯಿಂದ ಮೊದಲು ಅರ್ಕಾವತಿ ಲೇಔಟ್ ನಲ್ಲಿ ನಿವೇಶ ಮಂಜೂರಾಗಿತ್ತು. ಆದರ ಬದಲಿಯಾಗಿ ನಾಡ ಪ್ರಭು ಕೆಂಪೇಗೌಡ ಲೇಔಲ್ಲಿ ನಿವೇಶನ ಕೊಡಲಾಗಿತ್ತು. ಈ ನಡುವೆ ಬೈರಪ್ಪ ಸಾವನ್ನಪ್ಪಿದ್ದ, ಆ ಬಳಿಕ ನಿವೇಶನದ ಹಕ್ಕನ್ನು ಲಕ್ಷ್ಮಮ್ಮನಿಗೆ ವರ್ಗಾವಣೆ ಮಾಡುವಂತೆ ಕೋರಿದ್ದರು.
ಈ ವೇಳೆ ನಕಲಿ ಬೈರಪ್ಪನ ದಾಖಲೆಗಳನ್ನು ಸೃಷ್ಟಿಸಿ ಫೋರ್ಜರಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಲಕ್ಷ್ಮಮ್ಮ ಬಿಡಿಎ ಗೆ ದೂರು ನೀಡಿದ್ದಾರೆ. ಬಿಡಿಎ ಅಧಿಕಾರಿಗಳು ಈ ಕುರಿತು ಆಂತರಿಕ ತನಿಖೆ ನಡೆಸಿದಾಗ, ಮಂಜುನಾಥ್ ಎಂಬಾತನನ್ನು ಬೈರಪ್ಪ ಪುತ್ರ ಎಂದು ನಕಲಿ ದಾಖಲೆ ಸೃಷ್ಟಿಸಿ, 40/60 ಅಳತೆಯ ಬೈರಪ್ಪ ನಿವೇಶನದ ಖಾತೆ ಬದಲಾವಣೆ ಮಾಡಲು ಬ್ರೋಕರ್ ಮುರಳಿಧರ್ ಜೊತೆಗೂಡಿ ಬಿಡಿಎ ಅಧಿಕಾರಿ ನಿವೃತ್ತ ವಿಷಯ ಸಹಾಯಕ ಚಿಕ್ಕರಾಯಿ ಈ ಫೋರ್ಜರಿಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಈ ಸಂಬಂಧ ಬಿಡಿಎ ಅಧಿಕಾರಿಗಳು ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.